ADVERTISEMENT

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ: ಬಿಸಿಯೂಟ ನೌಕರರ ಆಗ್ರಹ

ಸ್ಮೀಮ್‌ ನೌಕರರ ರಾಜ್ಯ ಸಮಾವೇಶದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 20:26 IST
Last Updated 11 ಡಿಸೆಂಬರ್ 2023, 20:26 IST
<div class="paragraphs"><p>ಸೋಮವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಆಯೋಜಿಸಿದ್ದ ‘ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿರುವ ಕೇಂದ್ರ ಪುರಸ್ಕೃತ ಯೋಜನೆಗಳು–ನೌಕರರ ಪರಿಸ್ಥಿತಿಗಳು’ ಕುರಿತು ವಿಚಾರಸಂಕಿರಣದಲ್ಲಿ ಕಾಂತರಾಜು, ಎಸ್.ಜಿ. ಸಿದ್ಧರಾಮಯ್ಯ, ಎಸ್. ವರಲಕ್ಷ್ಮಿ, ಎ.ಆರ್. ಸಿಂಧು ಮತ್ತು ಮಾಲಿನಿ ಮೇಸ್ತ ಪಾಲ್ಗೊಂಡಿದ್ದರು </p></div>

ಸೋಮವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಆಯೋಜಿಸಿದ್ದ ‘ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿರುವ ಕೇಂದ್ರ ಪುರಸ್ಕೃತ ಯೋಜನೆಗಳು–ನೌಕರರ ಪರಿಸ್ಥಿತಿಗಳು’ ಕುರಿತು ವಿಚಾರಸಂಕಿರಣದಲ್ಲಿ ಕಾಂತರಾಜು, ಎಸ್.ಜಿ. ಸಿದ್ಧರಾಮಯ್ಯ, ಎಸ್. ವರಲಕ್ಷ್ಮಿ, ಎ.ಆರ್. ಸಿಂಧು ಮತ್ತು ಮಾಲಿನಿ ಮೇಸ್ತ ಪಾಲ್ಗೊಂಡಿದ್ದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಅಂಗನವಾಡಿ, ಬಿಸಿಯೂಟ, ಆಶಾ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ (ಎನ್‌ಆರ್‌ಎಲ್‌ಎಂ) ಸೇರಿದಂತೆ ಗುತ್ತಿಗೆ ಪದ್ಧತಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಸ್ಕೀಮ್ ನೌಕರರ ರಾಜ್ಯ ಸಮಾವೇಶದಲ್ಲಿ ಆಗ್ರಹಿಸಲಾಯಿತು.

ADVERTISEMENT

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸೋಮವಾರ ಆಯೋಜಿಸಿದ್ದ ‘ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿರುವ ಕೇಂದ್ರ ಪುರಸ್ಕೃತ ಯೋಜನೆಗಳು–ನೌಕರರ ಪರಿಸ್ಥಿತಿಗಳು’ ಕುರಿತ ವಿಚಾರಸಂಕಿರಣದಲ್ಲಿ ‘ಸರ್ಕಾರಿ ನೌಕರರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ನೀಡಬೇಕೆಂದು 2024ರ ಜನವರಿ 20ರವರೆಗೆ ಗಡವು ನೀಡಲಾಯಿತು. ಬೇಡಿಕೆಗಳನ್ನು ಈಡೇರಿಸದಿದ್ದರೆ ಜನವರಿ 23ರಿಂದ ಅಹೋರಾತ್ರಿ ಧರಣಿ ಕೈಗೊಳ್ಳಲಾಗುವುದು’ ಎಂಬ ನಿರ್ಣಯ ಕೈಗೊಳ್ಳಲಾಯಿತು.

ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಮಾತನಾಡಿ, ‘ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರು ಸೇರಿದಂತೆ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಕನಿಷ್ಠ ವೇತನ ನೀಡಲಾಗುತ್ತಿದೆ. ಸರ್ಕಾರ ಮತ್ತು ಏಜೆಂಟರ ನಡುವೆ ಹೊರಗುತ್ತಿಗೆ ನೌಕರರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಆಹಾರ, ಆರೋಗ್ಯ ಮತ್ತು ಶಿಕ್ಷಣ, ಪ್ರಜಾಪ್ರಭುತ್ವದ ಬೆಳವಣಿಗೆಗೆ ಬೇಕಾಗಿರುವ ಮೂಲಭೂತ ಹಕ್ಕುಗಳಾಗಿದ್ದು, ಇವುಗಳನ್ನು ಪ್ರತಿಯೊಬ್ಬರಿಗೂ ಸಮಾನವಾಗಿ ಹಂಚಿಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ಸಿಐಟಿಯುನ ರಾಷ್ಟ್ರೀಯ ಕಾರ್ಯದರ್ಶಿ ಎ.ಆರ್. ಸಿಂಧು, ‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌), ಬಿಸಿಯೂಟ ಯೋಜನೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ, ನರೇಗಾ ಯೋಜನೆಗಳಿಗೆ ಕೇಂದ್ರದ ಬಜೆಟ್‌ನಲ್ಲಿ ಅನುದಾನವನ್ನು ಕಡಿತಗೊಳಿಸಲಾಗಿದೆ. ಇದರಿಂದ, ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗಿದೆ. ರಾಜ್ಯದಿಂದ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುವ ಜಿಎಸ್‌ಟಿ ಹಣದಲ್ಲಿ ರಾಜ್ಯದ ಪಾಲನ್ನು ಹಂಚಿಕೆ ಮಾಡುತ್ತಿಲ್ಲ’ ಎಂದು ದೂರಿದರು.

‘ದೇಶದಲ್ಲಿರುವ ಶ್ರೀಮಂತರ ಮೇಲೆ ಶೇ 2ರಷ್ಟು ವಿಶೇಷ ತೆರಿಗೆ ವಿಧಿಸಿದರೆ ಸುಮಾರು ₹ 38 ಲಕ್ಷ ಕೋಟಿ ಸಿಗಲಿದೆ. ಇದರಿಂದ ಎಲ್ಲ ಯೋಜನೆಗಳನ್ನು ಕಾಯಂಗೊಳಿಸಬಹುದು. ಜೊತೆಗೆ ದೇಶದ ಜಿಡಿಪಿ ಹೆಚ್ಚಳಕ್ಕೂ ಇದು ಸಹಾಯಕವಾಗಲಿದೆ’ ಎಂದರು.

ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ ಎಸ್. ವರಲಕ್ಷ್ಮಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಬಿಸಿಯೂಟ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ, ಐಸಿಪಿಎಸ್‌ ನೌಕರರ ಸಂಘದ ಕಾಂತರಾಜು ಭಾಗವಹಿಸಿದ್ದರು.

ಬೇಡಿಕೆಗಳು

ಕೇಂದ್ರ ಪುರಸ್ಕೃತ ಎಲ್ಲ ಯೋಜನೆಗಳನ್ನು ಕಾಯಂಗೊಳಿಸಿ ಅನುದಾನ ಹೆಚ್ಚಿಸಬೇಕು. l ಕೇಂದ್ರ ಮತ್ತು ರಾಜ್ಯದ ವೇತನ ಆಯೋಗದಲ್ಲಿ ಯೋಜನಾ ಕಾರ್ಮಿಕರಿಗೆ ಹುದ್ದೆಯ ಪ್ರಕಾರ ಪ್ರತ್ಯೇಕ ವೃಂದ ರಚಿಸಿ ಬಲಗೊಳಿಸಬೇಕು. l ರಾಜ್ಯದಲ್ಲಿ ಹುದ್ದೆಗಳ ಭರ್ತಿಯಲ್ಲಿ ಸಂದರ್ಭದಲ್ಲಿ ಶೇ 75ರಷ್ಟು ಮೀಸಲಾತಿಯನ್ನು ಈ ನೌಕರರಿಗೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.