ADVERTISEMENT

ಅನ್ನಭಾಗ್ಯ | ರಾಗಿ, ಜೋಳವನ್ನು ರೈತರಿಂದ ಖರೀದಿಸಿ: ಪ್ರಕಾಶ್‌ ಕಮ್ಮರಡಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2023, 5:27 IST
Last Updated 20 ಜೂನ್ 2023, 5:27 IST
ಡಾ. ಟಿ.ಎನ್‌. ಪ್ರಕಾಶ್‌ ಕಮ್ಮರಡಿ
ಡಾ. ಟಿ.ಎನ್‌. ಪ್ರಕಾಶ್‌ ಕಮ್ಮರಡಿ   

ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ರಾಗಿ ಮತ್ತು ಜೋಳವನ್ನು ನಮ್ಮ ರೈತರಿಂದ ಖರೀದಿಸಿ ಬಳಸಿಕೊಳ್ಳಬೇಕು ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್‌ ಕಮ್ಮರಡಿ ಸಲಹೆ ನೀಡಿದ್ದಾರೆ.

ಅಕ್ಕಿಯನ್ನು ಒದಗಿಸಲು ಕೇಂದ್ರ ನಿರಾಕರಿಸಿದೆ. ಅದಕ್ಕೆ ಬದಲಿಯಾಗಿ ರಾಗಿ, ಜೋಳವನ್ನು ನೀಡಬೇಕು. ಸದ್ಯಕ್ಕೆ ಅಗತ್ಯ ಇರುವಷ್ಟು ಪ್ರಮಾಣದಲ್ಲಿ ರಾಗಿ, ಜೋಳ ಸಿಗದೇ ಇರಬಹುದು. ಸ್ವಾಮಿನಾಥನ್‌ ಸಮಿತಿಯ ಶಿಫಾರಸಿನಂತೆ ಬೆಂಬಲ ಬೆಲೆಯ ಆಧಾರದಲ್ಲಿ ಖರೀದಿಸುವ ಆಶ್ವಾಸನೆ ನೀಡಿದರೆ ರೈತರು ಮುಂಗಾರಿನಲ್ಲಿ ಬೆಳೆಯಬಹುದು ಎಂದು ತಿಳಿಸಿದ್ದಾರೆ.

ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಆರೋಪವೂ ಇದೆ. ರಾಗಿ, ಜೋಳ ಖರೀದಿಯಿಂದ ಅದಕ್ಕೆ ಕಡಿವಾಣ ಬೀಳಲಿದೆ. ಅಪೌಷ್ಟಿಕ ಸಮಸ್ಯೆಯನ್ನು ಹೋಗಲಾಡಿಸಲೂ ಉಪಯೋಗವಾಗಲಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.