ಬೆಂಗಳೂರು: ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಅಧಿಕಾರಿ, ನೌಕರರ ಸಾಮಾನ್ಯ ಭವಿಷ್ಯ ನಿಧಿಯ (ಜಿಪಿಎಫ್) ವೈಯಕ್ತಿಕ ಖಾತೆಯ ಸಂಗ್ರಹಿತ ಮೊತ್ತ, ಬಡ್ಡಿ ಹಾಗೂ ಒಟ್ಟು ಮೊತ್ತದ ವಿವರವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಅಖಿಲ ಭಾರತ ಸೇವೆಯ ಅಧಿಕಾರಿಗಳು, ರಾಜ್ಯದ ನ್ಯಾಯಾಲಯಗಳ ನ್ಯಾಯಮೂರ್ತಿಗಳು, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಖಾತೆ ವಿವರಗಳನ್ನು ಬಿಡುಗಡೆ ಮಾಡಲಾಗಿದೆ. ಸಾಮಾನ್ಯ ಭವಿಷ್ಯ ನಿಧಿಯ ವಂತಿಕೆದಾರರು ತಮ್ಮ ಖಾತೆಯ ವಿವರಗಳನ್ನು ಮಹಾಲೇಖಪಾಲರು, ಕರ್ನಾಟಕ ಕಚೇರಿಯ ವೆಬ್‌ಸೈಟ್ https://www.agkar.cag.gov.in ವಿಳಾಸದಿಂದ ಪಡೆಯಬಹುದಾಗಿದೆ ಎಂದು ಮಹಾಲೇಖಪಾಲರು ತಿಳಿಸಿದ್ದಾರೆ.
ವಂತಿಕೆದಾರರು ತಮ್ಮ ವಾರ್ಷಿಕ ವಿವರದಲ್ಲಿ ವಂತಿಕೆ ಹಾಗೂ ಅಂತಿಮ/ಮುಂಗಡ/ಭಾಗಶಃ ಹಿಂತೆಗೆತದ ವಿಷಯವಾಗಿ ಏನಾದರೂ ಲೋಪದೋಷಗಳು ಕಂಡುಬಂದಲ್ಲಿ ಹಿರಿಯ ಲೆಕ್ಕಾಧಿಕಾರಿ, ಇಡಿಪಿ (ಸಾಮಾನ್ಯ ಭವಿಷ್ಯ ನಿಧಿ– ಜಿಪಿಎಫ್), ಮಹಾಲೇಖಪಾಲರ ಕಚೇರಿ (ಲೆಕ್ಕ ಮತ್ತು ಹಕ್ಕುದಾರಿ) ಕರ್ನಾಟಕ, ಪಾರ್ಕ್‌ಹೌಸ್ ರಸ್ತೆ, ಬೆಂಗಳೂರು – 560001 – ಇವರಿಗೆ ಪತ್ರ ಬರೆಯಬಹುದಾಗಿದೆ ಎಂದು ಪ್ರಕಟಣೆ ಕೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.