ADVERTISEMENT

ಕಸ ವಿಲೇವಾರಿ ಮಾಹಿತಿಗೆ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 19:13 IST
Last Updated 17 ಸೆಪ್ಟೆಂಬರ್ 2020, 19:13 IST

ಬೆಂಗಳೂರು: ನಗರದಲ್ಲಿ ಕಸ ವಿಲೇವಾರಿ ಕುರಿತು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಹಾಗೂ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಗುರುವಾರ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಗೌರವ್‌ ಗುಪ್ತ ಮಾತನಾಡಿ, ‘ನಗರದಲ್ಲಿ ಕಸದ ಸಮಸ್ಯೆ ಆಗದಂತೆ ಹಾಗೂ ವೈಜ್ಞಾನಿಕ
ವಾಗಿ ಕಸ ವಿಲೇವಾರಿ ಮಾಡಲು ಸೂಚನೆ ನೀಡಲಾಗಿದೆ. ಈಗಾಗಲೇ 38 ವಾರ್ಡ್‌ಗಳಿಗೆ ಕಾರ್ಯಾ
ದೇಶ ನೀಡಲಾಗಿದ್ದು, 78 ವಾರ್ಡ್‌ಗಳಿಗೆ ಒಪ್ಪಿಗೆ ಪತ್ರ ನೀಡಲಾಗಿದೆ. ಅಲ್ಲಿಯೂ ತ್ವರಿತವಾಗಿ ಕಾರ್ಯಾ
ದೇಶ ನೀಡಿ ಕೆಲಸ ಪ್ರಾರಂಭಿಸಲು ತಿಳಿಸಲಾಗಿದೆ’ ಎಂದರು.

‘ಒಣ ಹಾಗೂ ಹಸಿ ಕಸ ವಿಂಗಡಣೆ ಮಾಡಿಕೊಡಬೇಕು. ಈ ಬಗ್ಗೆ ನಾಗರಿಕರಿಗೆ ನೂತನ ಆ್ಯಪ್ ಮೂಲಕ ಲೈವ್‌ ಮಾಹಿತಿ ಲಭ್ಯವಾಗಬೇಕು. ಯಾವ ಸಮಯದಲ್ಲಿ ಆಟೊ ಬರಲಿದೆ ಎಂಬುದರ ಬಗ್ಗೆ ಹಾಗೂ ಮನೆ ಕಸ ಸಂಗ್ರಹಿಸದಿದ್ದರೆ ದೂರು ಕೊಡುವ ಆಯ್ಕೆಯನ್ನು ಆ್ಯಪ್‌ನಲ್ಲಿ ಇಡಬೇಕು’ ಎಂದರು.

ADVERTISEMENT

‘ಪಾಲಿಕೆಯ ವರಮಾನ ಹೆಚ್ಚಳ ಮಾಡುವ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ. ಆದಾಯ ಹೆಚ್ಚಿಸಲು ಆಸ್ತಿ ತೆರಿಗೆ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಪರಿಷ್ಕರಿಸಿ ಸಲ್ಲಿಸಲು ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.