ADVERTISEMENT

ಚಿಟಿಕೆ ಸುದ್ದಿಗಳು | ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 20:15 IST
Last Updated 8 ಸೆಪ್ಟೆಂಬರ್ 2025, 20:15 IST
<div class="paragraphs"><p>ಬೆಂಗಳೂರು&nbsp;ವಿಶ್ವವಿದ್ಯಾಲಯ</p></div>

ಬೆಂಗಳೂರು ವಿಶ್ವವಿದ್ಯಾಲಯ

   

ಅರ್ಜಿ ಆಹ್ವಾನ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಮತ್ತು ರಾಮನಗರ ಸ್ನಾತಕೋತ್ತರ ಕೇಂದ್ರದಲ್ಲಿ 2025–26ನೇ ಶೈಕ್ಷಣಿಕ ಸಾಲಿನಲ್ಲಿ ಪೂರ್ಣಕಾಲಿಕ/ಅರೆಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ADVERTISEMENT

ಸ್ನಾತಕೋತ್ತರ ಪದವಿ ಪಡೆದಿರುವ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್‌ 14ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ
https:/bangaloreuniversity karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು
ಪ್ರಕಟಣೆ ತಿಳಿಸಿದೆ.

ಜಲಮೂಲಗಳ ಪುನಶ್ಚೇತನ ಕಾರ್ಯಕ್ರಮ ನಾಳೆ

ಬೆಂಗಳೂರು: ಸಂಪೂರ್ಣ ಸಂಘ ಮತ್ತು ತೇರಾಪಂತ್‌ ಮಹಿಳಾ ಮಂಡಲದಿಂದ ಇದೇ 10ರಂದು ವಿಜಯನಗರದ ಅರ್ಹಂ ಭವನದಲ್ಲಿ ಜಲಸಂರಕ್ಷಣೆ ಮತ್ತು ಜಲಮೂಲಗಳ ಪುನಶ್ಚೇತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಪೂರ್ಣ ಸಂಘದ ರಾಷ್ಟ್ರೀಯ ಅಧ್ಯಕ್ಷೆ ಶೋಭಾ ವಿಜಯೇಂದ್ರ ಸಿಂಗ್, ‘ಕಾರ್ಯಕ್ರಮದಲ್ಲಿ ಜಲ ಮೂಲಗಳ ಸಂರಕ್ಷಣೆಯ ಕುರಿತು ಸಂವಾದಗಳು ನಡೆಯಲಿವೆ. ಜಲ ಸಂರಕ್ಷಣೆ ಮಾಡುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ’ ಎಂದು ಹೇಳಿದರು.

ಮಂಜುನಾಥ ಪ್ರಭುಗೆ ‘ಸಾರ್ಥಕ ಸಾಧಕ’ ಪ್ರಶಸ್ತಿ

ಬೆಂಗಳೂರು: ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ‘ಸಾರ್ಥಕ ಸಾಧಕ’ ಪ್ರಶಸ್ತಿಗೆ ಚೇರ್ಕಾಡಿ ಮಂಜುನಾಥ ಪ್ರಭು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಯಕ್ಷ ಸಿಂಚನ ಟ್ರಸ್ಟ್‌ ತಿಳಿಸಿದೆ. 

ಯಕ್ಷಗಾನದಲ್ಲಿ ನಾಲ್ಕು ದಶಕಗಳ ಕಾಲ ವಿಶಿಷ್ಟ ಸೇವೆ ಸಲ್ಲಿಸಿರುವ ಚೇರ್ಕಾಡಿ ಮಂಜುನಾಥ ಪ್ರಭು ಅವರಿಗೆ ಸೆಪ್ಟೆಂಬರ್‌ 21ರಂದು ಬೆಂಗಳೂರಿನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ನಡೆಯುವ ಯಕ್ಷಸಿಂಚನದ 16ನೇ ವಾರ್ಷಿಕೋತ್ಸವ ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. 

ಪಶ್ಚಿಮ ವಿಭಾಗದ ಅಂಚೆ ಅದಾಲತ್ 11ಕ್ಕೆ

ಬೆಂಗಳೂರು: ಬೆಂಗಳೂರು ಪಶ್ಚಿಮ ವಿಭಾಗದ ಅಂಚೆ ಅದಾಲತ್ ಸೆಪ್ಟೆಂಬರ್ 11ರಂದು ಬೆಳಿಗ್ಗೆ 11 ಗಂಟೆಗೆ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿರುವ ಅಂಚೆ ಕಚೇರಿಯಲ್ಲಿ ನಡೆಯಲಿದೆ. 

ಬೆಂಗಳೂರು ಪಶ್ಚಿಮ ವಿಭಾಗಕ್ಕೆ ಸಂಬಂಧಿಸಿದ ಅಂಚೆ ಸೇವೆಗಳಿಗೆ ಸಂಬಂಧಿಸಿದ ಕುಂದು-ಕೊರತೆಗಳು ಅಥವಾ ಮೇಲ್‍ಗಳ ವಿತರಣೆ, ಸ್ಪೀಡ್ ಪೋಸ್ಟ್‌, ಲೇಖನಗಳು, ಪಾರ್ಸೆಲ್‍ಗಳು, ಮನಿ ಆರ್ಡರ್‌, ಉಳಿತಾಯ ಖಾತೆ, ನಗದು ಪ್ರಮಾಣ ಪತ್ರಗಳು ಮತ್ತು ಕೌಂಟರ್ ಸೇವೆಗಳ ದೂರುಗಳು ಇದ್ದರೆ
ಅಂಚೆ ಇಲಾಖೆ ಅಧೀಕ್ಷಕರನ್ನು ಭೇಟಿ ಮಾಡಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 

ಮಾಹಿತಿಗೆ: 080-23493264, 080-23493267.

ಪ್ರತಿಭಾ ಪುರಸ್ಕಾರ 11ಕ್ಕೆ 

ಬೆಂಗಳೂರು: ಡಾ. ರಾಜ್‌ಕುಮಾರ್ ರಂಗಭೂಮಿ ಚಲನಚಿತ್ರ ಟ್ರಸ್ಟ್‌ನ ಬೆಳ್ಳಿ ಹಬ್ಬದ ಅಂಗವಾಗಿ ಇದೇ 11ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ರಾಜ್‌ಕುಮಾರ್‌ ಪುರಸ್ಕಾರ ಹಾಗೂ ಡಾ. ರಾಜ್‌ಕುಮಾರ್‌ ಕನ್ನಡ ಪ್ರತಿಭಾ ಚೇತನ ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಎಂ.ಆರ್. ರಾಜು ತಿಳಿಸಿದರು. 

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳ್ಳಿ ಹಬ್ಬದ ಸಮಾರಂಭದಲ್ಲಿ ದಾರಿ ತಪ್ಪಿದ ಮಗ, ಮಯೂರ ಚಿತ್ರಗಳ 50 ವರ್ಷದ ಸಂಭ್ರಮ, ಡಾ. ರಾಜ್‌ಕುಮಾರ್ ಅವರಿಗೆ ಗಾಯನ, ನೃತ್ಯ ಹಾಗೂ ರಂಗ ನಮನ ಸಲ್ಲಿಸಲಾಗುತ್ತದೆ. ಇದರ ಜೊತೆಗೆ ಚಿತ್ರಕಲಾ ಶಿಬಿರ, ನೇತ್ರದಾನ ಹಾಗೂ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದ ಬಸವರಾಜ ಬೊಮ್ಮಾಯಿ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಿದ್ದಾರೆ. ಸಂಸದ ಪಿ.ಸಿ. ಮೋಹನ್, ನಿವೃತ್ತ ಐಪಿಎಸ್ ಅಧಿಕಾರಿ ಸುಭಾಷ್ ಭರಣಿ, ನಟ ವಿನಯ್ ರಾಜ್‌ಕುಮಾರ್, ನಟಿ ರೂಪಿಕಾಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.