ADVERTISEMENT

ಬೆಂಗಳೂರು ಕ್ರೈಸ್ತ ಮಹಾಧರ್ಮಕ್ಷೇತ್ರಕ್ಕೆ ಇಬ್ಬರು ಸಹಾಯಕ ಧರ್ಮಾಧ್ಯಕ್ಷರ ನೇಮಕ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 16:05 IST
Last Updated 13 ಜುಲೈ 2024, 16:05 IST
ಆರೋಕ್ಯರಾಜ್ ಸತೀಶ್ ಕುಮಾರ್
ಆರೋಕ್ಯರಾಜ್ ಸತೀಶ್ ಕುಮಾರ್   

ಬೆಂಗಳೂರು: ಬೆಂಗಳೂರು ಕ್ರೈಸ್ತ ಮಹಾಧರ್ಮಕ್ಷೇತ್ರಕ್ಕೆ ಧರ್ಮಗುರು ಆರೋಕ್ಯರಾಜ್ ಸತೀಶ್ ಕುಮಾರ್ ಮತ್ತು ಧರ್ಮಗುರು ಜೋಸೆಫ್ ಸೂಸೈನಾದನ್ ಅವರನ್ನು ಸಹಾಯಕ ಧರ್ಮಾಧ್ಯಕ್ಷರನ್ನಾಗಿ (ಆ್ಯಕ್ಸಿಲರಿ ಬಿಷಪ್ಸ್‌) ನೇಮಕ ಮಾಡಲಾಗಿದೆ.

ಪೋಪ್‌ ಫ್ರಾನ್ಸಿಸ್‌ ಅವರು ರೋಮ್‌ ನಗರದಲ್ಲಿ ಶನಿವಾರ ಈ ನೇಮಕವನ್ನು ಪ್ರಕಟಿಸಿದ್ದಾರೆ ಎಂದು ಬೆಂಗಳೂರಿನ ಆರ್ಚ್‌ ಬಿಷಪ್‌ ಪೀಟರ್ ಮಚಾದೊ ತಿಳಿಸಿದ್ದಾರೆ.

ಆರೋಕ್ಯರಾಜ್ ಸತೀಶ್ ಕುಮಾರ್ ಅವರು ಬೆಂಗಳೂರು ಮಹಾಧರ್ಮಕ್ಷೇತ್ರದ ಚಾನ್ಸಲರ್‌ ಆಗಿ ಹಾಗೂ ಸೇಂಟ್ ಪೀಟರ್ಸ್ ಪೊಂಟಿಫಿಕಲ್ ಸೆಮಿನರಿಯಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

ಜೋಸೆಫ್ ಸೂಸೈನಾದನ್ ಅವರು ಬೆಂಗಳೂರು ಮಹಾಧರ್ಮಕ್ಷೇತ್ರದ ರಿಚ್ಮಂಡ್ ರಸ್ತೆಯಲ್ಲಿರುವ ಸೇಕ್ರೆಡ್ ಹಾರ್ಟ್‌ ಚರ್ಚ್‌ನಲ್ಲಿ ಧರ್ಮಕೇಂದ್ರದ ಗುರುಗಳಾಗಿದ್ದಾರೆ.

ಜೋಸೆಫ್ ಸೂಸೈನಾದನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.