ADVERTISEMENT

98ರ ವೃದ್ಧೆಗೆ ‘ಸೊಂಟ ಬದಲಿ’ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 19:24 IST
Last Updated 17 ಜನವರಿ 2019, 19:24 IST
ಲಕ್ಷ್ಮಮ್ಮ
ಲಕ್ಷ್ಮಮ್ಮ   

ಬೆಂಗಳೂರು: ಬಲಭಾಗದ ಸೊಂಟ ಮುರಿದು ಓಡಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ98 ವರ್ಷದ ವೃದ್ಧೆಗೆ ಅಪೊಲೊ ಆಸ್ಪತ್ರೆಯ ವೈದ್ಯರು ‌‘ಸೊಂಟ ಬದಲಿ’ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ತುಮಕೂರಿನ ಶಿರಾ ತಾಲ್ಲೂಕಿನ ವೃದ್ಧೆ ಲಕ್ಷ್ಮಮ್ಮ ಅವರುಮಾರ್ಚ್‌ನಲ್ಲಿ ಬಿದ್ದು ಸೊಂಟ ಮುರಿದುಕೊಂಡಿದ್ದರು. ಅವರಿಗೆ ಹತ್ತು ವರ್ಷಗಳ ಹಿಂದೆಯೂ (88ನೇ ವರ್ಷ) ಎಡಭಾಗದ ಸೊಂಟ ಮುರಿದಿತ್ತು. ಆಗಲೂ ನೀಡಿದ್ದ ಬದಲಿ ಶಸ್ತ್ರಚಿಕಿತ್ಸೆ ಸಫಲವಾಗಿತ್ತು.

‘ಮಲಮೂತ್ರ ವಿಸರ್ಜನೆಗೂ ಅವರು ತೊಂದರೆಪಡಬೇಕಿತ್ತು. ಮಾರ್ಚ್‌ನಲ್ಲಿ ಆಸ್ಪತ್ರೆಗೆ ‌ದಾಖಲಾದರು. ಮೂಳೆ, ಹೃದಯದ ಸ್ಥಿತಿಗಳು ಶಸ್ತ್ರಚಿಕಿತ್ಸೆಗೆ ತೊಡಕಾಗಿದ್ದವು. ಇದನ್ನೇ ಸವಾಲಾಗಿ ಸ್ವೀಕರಿಸಿ, ಕುಟುಂಬದ ಸದಸ್ಯರ ಒಪ್ಪಿಗೆ ಪಡೆದು ಚಿಕಿತ್ಸೆ ನೀಡಲಾಯಿತು’ ಎಂದು ಆಸ್ಪತ್ರೆಯ ಡಾ.ವಾಸುದೇವ ಪ್ರಭು ವಿವರಿಸಿದರು.

ADVERTISEMENT

‘ಚಿಕಿತ್ಸೆ ಪಡೆದ 24 ಗಂಟೆಯಲ್ಲಿ ಸಹಾಯಕರ ನೆರವಿನಿಂದ ಓಡಾಡಲಾರಂಭಿಸಿದರು. 10 ದಿನಗಳ ನಂತರ ಅವರನ್ನು ಡಿಸ್‌ಚಾರ್ಜ್‌ ಮಾಡಲಾಯಿತು. ಅಂದಿನಿಂದ ಇಲ್ಲಿಯವರೆಗೂ ಸಮಸ್ಯೆ ಕಂಡು ಬಂದಿಲ್ಲ. ಪ್ರಸ್ತುತ ಎಂದಿನಂತೆ ಮತ್ತು ಎಲ್ಲರಂತೆ
ನಡೆದಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಯಾರ ಸಹಾಯ ಪಡೆಯದೆ ವಾಕಿಂಗ್‌ ಸ್ಟಿಕ್‌ ಮೂಲಕ ಓಡಾಡುವೆ’ ಎಂದು ಲಕ್ಷ್ಮಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.