ADVERTISEMENT

ಹಂದಿ ಮಾಂಸ ತಿನ್ನುವುದಕ್ಕೆ ಬಿಡಿ: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2023, 16:07 IST
Last Updated 7 ಡಿಸೆಂಬರ್ 2023, 16:07 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ವಿಧಾನಸಭೆ: ‘ಬೆಳೆಹಾನಿ ಮಾಡುವ ಕಾಡು ಹಂದಿಯನ್ನು ರೈತರು ಗುಂಡು ಹೊಡೆದು ಸಾಯಿಸಿದ ಪ್ರಕರಣಗಳಲ್ಲಿ ಅವುಗಳ ಮಾಂಸವನ್ನು ಅವರು ತಿನ್ನಲು ಅವಕಾಶ ನೀಡಬೇಕು’ ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಆಗ್ರಹಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ವನ್ಯಜೀವಿ– ಮಾನವ ಸಂಘರ್ಷದ ಕುರಿತ ಚರ್ಚೆಯಲ್ಲಿ ಮಧ್ಯ ಪ್ರವೇಶ ಮಾಡಿದ ಅವರು, ‘ಬೆಳೆ ಹಾನಿ ಮಾಡುವ ಕಾಡು ಹಂದಿಗೆ ಗುಂಡು ಹೊಡೆದು ಸಾಯಿಸಲು ಅರಣ್ಯ ಕಾಯ್ದೆಯಲ್ಲಿ ಅವಕಾಶವಿದೆ. ಆದರೆ, ಹಂದಿಯ ಮಾಂಸ ತಿನ್ನುವಂತಿಲ್ಲ. ಈ ರೀತಿ ಹಂದಿ ಮಾಂಸ ಕತ್ತರಿಸುತ್ತಿದ್ದ ನನ್ನ ಕ್ಷೇತ್ರದ ಜನರನ್ನು ಬಂಧಿಸಲಾಗಿದೆ. ಇಂತಹ ಕಾನೂನನ್ನು ಮೊದಲು ಬದಲಾವಣೆ ಮಾಡಿ’ ಎಂದು ಒತ್ತಾಯಿಸಿದರು.

ಕಾಡುಹಂದಿಯ ಮಾಂಸ ತಿನ್ನಲು ಯತ್ನಿಸಿದರು ಎಂಬ ಕಾರಣಕ್ಕೆ ರೈತರನ್ನು ಬಂಧಿಸುವುದು ಯಾವ ನ್ಯಾಯ? ಇದು ಎಂಥಹ ಕಾನೂನು ಎಂದು ಪ್ರಶ್ನಿಸಿದರು.

ADVERTISEMENT

ಮಂಗ, ಕಾಡುಕೋಣ, ಕಾಡೆಮ್ಮೆ, ಕಾಡು ಹಂದಿಗಳ ಹಾವಳಿಯಿಂದ ರೈತರು ಬದುಕುವುದೇ ಕಷ್ಟವಾಗಿದೆ. ಬೆಳೆ ಉಳಿಸಿಕೊಳ್ಳಲು ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ವನ್ಯಜೀವಿ ಹಾವಳಿ ತಡೆಗೆ ಸರ್ಕಾರ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.