ADVERTISEMENT

ಎಆರ್‌ಐಐಎ ರ್‍ಯಾಂಕಿಂಗ್: ವಿಐಟಿಗೆ ಮೊದಲ ಸ್ಥಾನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 19:12 IST
Last Updated 9 ಏಪ್ರಿಲ್ 2019, 19:12 IST
ವಿಐಟಿ ಕುಲಪತಿ ಡಾ.ಜಿ. ವಿಶ್ವನಾಥನ್ ಅವರು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಎಆರ್‌ಐಐಎ ಪ್ರಶಸ್ತಿ ಸ್ವೀಕರಿಸಿದರು
ವಿಐಟಿ ಕುಲಪತಿ ಡಾ.ಜಿ. ವಿಶ್ವನಾಥನ್ ಅವರು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಎಆರ್‌ಐಐಎ ಪ್ರಶಸ್ತಿ ಸ್ವೀಕರಿಸಿದರು   

ವೆಲ್ಲೂರು: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ದೇಶದ ಖಾಸಗಿ ಸಂಸ್ಥೆಗಳಿಗೆ ನೀಡುವ ರ್‍ಯಾಂಕಿಂಗ್ ಪಟ್ಟಿಯಲ್ಲಿ ವೆಲ್ಲೂರ್‌ ತಂತ್ರಜ್ಞಾನ ಸಂಸ್ಥೆ (ವಿಐಟಿ) ಮೊದಲ ಸ್ಥಾನ ಪಡೆದಿದೆ.

ಆವಿಷ್ಕಾರಿ ಸಾಧನೆಗೈದ ಸಂಸ್ಥೆಗಳಿಗೆ ನೀಡುವ ಅಟಲ್ ರ್‍ಯಾಂಕಿಂಗ್ (ಎಆರ್‌ಐಐಎ) ಪ್ರಶಸ್ತಿಯನ್ನು ಸರ್ಕಾರಿ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳು ವಿಭಾಗದಲ್ಲಿ ಪ್ರತ್ಯೇಕವಾಗಿ ನೀಡಲಾಗುತ್ತದೆ. 2019ನೇ
ಸಾಲಿನ ಈ ಪಟ್ಟಿಯಲ್ಲಿ ಖಾಸಗಿ ಸಂಸ್ಥೆಗಳ ವಿಭಾಗದಲ್ಲಿ ವಿಐಟಿ ನಂ.1 ಸ್ಥಾನ ಗಳಿಸಿದೆ. ಈ ಬಾರಿ 10 ಸರ್ಕಾರಿ ಸಂಸ್ಥೆಗಳು ಹಾಗೂ ಐದು ಖಾಸಗಿ ಸಂಸ್ಥೆಗಳು ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಸ್ಥಾನ ಗಳಿಸಿವೆ.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರುಎಆರ್‌ಐಐಎ ಪ್ರಶಸ್ತಿ ಪ್ರದಾನ ಮಾಡಿದರು.

ADVERTISEMENT

ವಿಐಟಿ ಕುಲಪತಿ ಡಾ.ಜಿ. ವಿಶ್ವನಾಥನ್ ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.