ADVERTISEMENT

ಬೆಂಗಳೂರು: ಆ.15ರವರೆಗೆ ಕಲಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 16:16 IST
Last Updated 17 ಜುಲೈ 2024, 16:16 IST
ಪ್ರದರ್ಶನದಲ್ಲಿ ಇರುವ ಕಲಾಕೃತಿ
ಪ್ರದರ್ಶನದಲ್ಲಿ ಇರುವ ಕಲಾಕೃತಿ   

ಬೆಂಗಳೂರು: ಗೀತಾಂಜಲಿ ಮೈನಿ ಫೌಂಡೇಷನ್ ಲ್ಯಾವೆಲ್ಲೆ ರಸ್ತೆಯಲ್ಲಿರುವ ಗ್ಯಾಲರಿ ಜಿಯಲ್ಲಿ ‘ಮೊಸಾಯಿಕ್ ಆಫ್ ಮಾಡರ್ನಿಟಿ’ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಕಲಾ ಪ್ರದರ್ಶನಕ್ಕೆ ಚಾಲನೆ ದೊರೆತಿದ್ದು, ಆ.15ರವರೆಗೆ ಈ ಪ್ರದರ್ಶನ ನಡೆಯಲಿದೆ. 

ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಈ ಪ್ರದರ್ಶನ ನಡೆಯಲಿದೆ. ಕಲಾವಿದರಾದ ಜೈ ಖನ್ನಾ, ದಿನೇಶ್ ಮಗರ್, ಆರೋಹಿ ಸಿಂಗ್, ದಾಮೋದರ್ ಅವಾರೆ, ತುಷಾರ್ ಶಿಂಧೆ, ರೂನಾ ಬಿಸ್ವಾಸ್, ಅನಾಮಿಕ ಕುಚ್ಚನ್ ಹಾಗೂ ತ್ರಿದಿಬ್ ಬೇರಾ ಅವರ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಈ ಕಲಾ ಪ್ರದರ್ಶನ ಭಾರತದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸಲಿದೆ ಎಂದು ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT