
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಆರ್ಟ್ ಮಂತ್ರಂ ಟ್ರಸ್ಟ್ ವತಿಯಿಂದ ‘ಸೃಜನಶೀಲ ನಗರ ಬೆಂಗಳೂರು: ಸಂವಾದಗಳು ಮತ್ತು ಅನ್ವೇಷಣೆಗಳು’ ಉತ್ಸವ ಜ.15ರಿಂದ 25ರವರೆಗೆ ನಡೆಯಲಿದೆ. ವಸಂತ ನಗರದಲ್ಲಿ ಇರುವ ‘ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್’ನಲ್ಲಿ ಜ.15ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನೆಗೊಳ್ಳಲಿದೆ.
ವಿಭಿನ್ನ ಸಂಸ್ಕೃತಿಗಳ ಚಿಂತನೆ, ಸಂಪ್ರದಾಯಗಳ ವಿನಿಮಯ, ಕಲಾ ಪ್ರದರ್ಶನ, ವಿಚಾರಗೋಷ್ಠಿ, ಸಂವಾದ ಒಳಗೊಂಡ ಹತ್ತು ದಿನಗಳ ವಿಶಿಷ್ಟ ಉತ್ಸವ ಇದಾಗಿದೆ. ನಗರದಾದ್ಯಂತ ನಡೆಯಲಿರುವ ಈ ಉತ್ಸವದ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಲಾವಿದರ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ರಷ್ಯಾದ ನಾಲ್ವರು, ಆಸ್ಟ್ರಿಯಾದ ಇಬ್ಬರು, ಭಾರತದ ಇಬ್ಬರು ಕಲಾವಿದರು ಕಲಾ ಕೌಶಲ ಪ್ರದರ್ಶಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಆ್ಯಕ್ಸಿಲ್ ಸ್ಥಾಪಕ ಪಾಲುದಾರ ಪ್ರಶಾಂತ್ ಪ್ರಕಾಶ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್, ಆರ್ಟ್ ಮಂತ್ರಂ ಚೇರ್ಮನ್ ಟ್ರಸ್ಟಿ ಸುಧಾಕರ್ ರಾವ್, ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ (ಎನ್‌ಜಿಎಂಎ) ನಿರ್ದೇಶಕಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಜೀಜಾ ಹರಿ ಸಿಂಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.