ADVERTISEMENT

ಅರುಣೋದಯಂ ಟ್ರಸ್ಟ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 20:03 IST
Last Updated 4 ಅಕ್ಟೋಬರ್ 2019, 20:03 IST

ಬೆಂಗಳೂರು: ದಕ್ಷಿಣ ಭಾರತದಲ್ಲಿ ಅಂಗವಿಕಲರ ಏಳಿಗೆಗೆ ಶ್ರಮಿಸುತ್ತಿರುವ ಸರ್ಕಾರೇತರ ಸಂಸ್ಥೆಗಳಿಗೆ ನೀಡುವ ಎನ್.ಎಸ್. ಹೇಮಾ ಪ್ರಶಸ್ತಿಗೆ ಚೆನ್ನೈನ ಅರುಣೋದಯಂ ಟ್ರಸ್ಟ್‌ ಪಾತ್ರವಾಯಿತು.

ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಲಿಟಿ (ಎಪಿಡಿ) ಸಂಸ್ಥೆಯ 60ನೇ ವಾರ್ಷಿಕೋತ್ಸವ ಅಂಗವಾಗಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅರುಣೋದಯಂ ಚಾರಿಟಬಲ್‌ ಟ್ರಸ್ಟ್‌ನ ಟ್ರಸ್ಟಿ ನಂದಕುಮಾರ್ ಅವರಿಗೆ ₹1 ಲಕ್ಷ ನಗದು ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಅಂಗವಿಕಲರಿಗೆ ಉದ್ಯೋಗಾವಕಾಶ ಕಲ್ಪಿಸುವ ರಾಷ್ಟ್ರೀಯ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್‌ ಅಲಿ, ‘ಮಾನವ ಹಕ್ಕುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಂಗವಿಕಲರ ಸಮಸ್ಯೆಯನ್ನು ನೋಡಬೇಕಾಗಿದೆ’ ಎಂದರು. ‘ಎಪಿಡಿ ಸಂಸ್ಥೆಯನ್ನು ಎನ್‌.ಎಸ್‌. ಹೇಮಾ ಅವರು, ಕೆಲವು ಅಂಗವಿಕಲ ಸ್ನೇಹಿತರೊಡಗೂಡಿ 1959ರಲ್ಲಿ ಸ್ಥಾಪಿಸಿದರು. ಅಂಗವಿಕಲರನ್ನು ಸ್ವಾವಲಂಬಿಯನ್ನಾಗಿಸಲು ತರಬೇತಿ ನೀಡುವ, ಉದ್ಯೋಗಾವಕಾಶ ಒದಗಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ’ ಎಂದು ಅವರು ಶ್ಲಾಘಿಸಿದರು.

ADVERTISEMENT

ಅಜೀಂ ಪ್ರೇಮ್‌ಜಿ ಸಾಮಾಜಿಕ ಹೊಣೆಗಾರಿಕೆ ವಿಭಾಗದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಆನಂದ್‌ ಸ್ವಾಮಿನಾಥನ್, ಹಿರಿಯ ನಾಗರಿಕರ ಇಲಾಖೆಯ ನಿರ್ದೇಶಕಿ ಕೆ. ಲೀಲಾವತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.