ADVERTISEMENT

ಉರುಸ್‌ನಲ್ಲಿ ಅಶ್ವತ್ಥನಾರಾಯಣ ಭಾಗಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 19:33 IST
Last Updated 30 ಜನವರಿ 2023, 19:33 IST
ಸಂದಲ್‌ ಉರುಸ್‌ನಲ್ಲಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಪಾಲ್ಗೊಂಡಿದ್ದರು
ಸಂದಲ್‌ ಉರುಸ್‌ನಲ್ಲಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಪಾಲ್ಗೊಂಡಿದ್ದರು   

ಬೆಂಗಳೂರು: ಮಲ್ಲೇಶ್ವರದ ಬಾಂಧವ್ಯ ನಗರದ ಪಾರ್ಸಿ ಗಾರ್ಡನ್‌ನಲ್ಲಿ ಮುಸ್ಲಿಮರು ಸೋಮವಾರ ಆಯೋಜಿಸಿದ್ದ ಸಂದಲ್‌ ಉರುಸ್‌ನಲ್ಲಿ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಪಾಲ್ಗೊಂಡಿದ್ದರು.

‘ಭಾರತದಲ್ಲಿ ನೂರಾರು ಸಮುದಾಯಗಳು, ಹತ್ತಾರು ಧರ್ಮಗಳು ಸಾವಿರಾರು ವರ್ಷಗಳಿಂದಲೂ ಸೌಹಾರ್ದದಿಂದ ಬದುಕುತ್ತಿವೆ. ಈ ವಾತಾವರಣವು ಸಮಾಜದಲ್ಲಿ ಶಾಂತಿಗೆ ಕಾರಣವಾಗಿದ್ದು, ಸಮೃದ್ಧಿ ತಂದಿದೆ’ ಎಂದು ಸಚಿವರು ಹೇಳಿದರು.

‘ಸಂಸ್ಕೃತಿ, ಸಂಪ್ರದಾಯಗಳನ್ನು ಸಮುದಾಯಗಳು ಪರಸ್ಪರ ಗೌರವಿಸಬೇಕು. ಎಲ್ಲರೂ ಕೊಡುಕೊಳ್ಳುವಿಕೆಯ ತತ್ವ ಆಧರಿಸಿ ಬದುಕಬೇಕು’ ಎಂದು ಆಶಿಸಿದರು.

ADVERTISEMENT

‘ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟ. ನಮ್ಮಲ್ಲಿ ಎಂದೂ ಆಕ್ರಮಣಶೀಲತೆ ಕಂಡುಬಂದಿಲ್ಲ. ಇಲ್ಲಿ ಯಾರೂ ಪ್ರತ್ಯೇಕತೆಯ ಭಾವನೆಯನ್ನು ಎಂದಿಗೂ ಬೆಳೆಸಿಕೊಂಡಿಲ್ಲ. ನಮ್ಮಲ್ಲಿನ ಧರ್ಮ, ಭಕ್ತಿ ಚಳವಳಿಗಳ ಪ್ರಭಾವವೂ ಈ ನೆಲದಲ್ಲಿದೆ. ಸಹಿಷ್ಣುತೆಯಿಂದಾಗಿ ರಾಜ್ಯವು ಇಂದು ಮೇಲ್ಪಂಕ್ತಿಯಲ್ಲಿದೆ’ ಎಂದರು.

ಬಿಬಿಎಂಪಿ ಮಾಜಿ ಸದಸ್ಯೆ ಹೇಮಲತಾ ಕೇಶವ, ಬಿಜೆಪಿ ಮುಖಂಡರಾದ ಶಕೀಲ್ ಅಹಮದ್‌, ಕೇಶವಮೂರ್ತಿ, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.