ಬೆಂಗಳೂರು: ಎಚ್ಡಿಎಫ್ಸಿ ಬ್ಯಾಂಕ್ ಖಾತೆದಾರರ ಹೆಸರಿನಲ್ಲಿ ನಕಲಿ ಎಟಿಎಂ ಕಾರ್ಡ್ ಸೃಷ್ಟಿಸಿ ₹ 60 ಸಾವಿರ ಡ್ರಾ ಮಾಡಿ ವಂಚಿಸಲಾಗಿದ್ದು, ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಖಾಸಗಿ ಕಂಪನಿ ಉದ್ಯೋಗಿ ಆದ 26 ವರ್ಷದ ಯುವತಿ ದೂರು ನೀಡಿದ್ದಾರೆ. ‘ಇದೇ 2ರಂದು ಬೆಳಿಗ್ಗೆ 5.55ರಿಂದ 6.01ರ ಅವಧಿಯಲ್ಲಿ ಯುವತಿ ಬ್ಯಾಂಕ್ ಖಾತೆಯಿಂದ6 ಬಾರಿ ತಲಾ ₹ 10 ಸಾವಿರ ಡ್ರಾ ಆಗಿದೆ. ಆದರೆ ಯುವತಿ ವಹಿವಾಟು ನಡೆಸಿಲ್ಲ. ಸ್ಕಿಮ್ಮರ್ ಬಳಸಿ ಖಾತೆ ಮಾಹಿತಿ ಕದ್ದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.