
ಬೆಂಗಳೂರು: ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿ.27ರಿಂದ ಜ.4ವರೆಗೆ ಅವರೆಬೇಳೆ ಮೇಳವನ್ನು ಆಯೋಜಿಸಲಾಗಿದೆ.
ವಾಸವಿ ಕಾಂಡಿಮೆಂಟ್ಸ್ ತಂಡವು ಮಾಗಡಿ ಹಾಗೂ ಸುತ್ತಮುತ್ತಲಿನ ರೈತರಿಂದ 60 ಟನ್‌ಗೂ ಅಧಿಕ ಅವರೆ ಕಾಯಿಯನ್ನು ಖರೀದಿಸಿದೆ. ಬಗೆಬಗೆಯ 120 ಖಾದ್ಯಗಳನ್ನು ತಯಾರಿಸಿ ಮೇಳದ ಮೂಲಕ ಮಾರಾಟ ಮಾಡಲಾಗುತ್ತದೆ. 26ನೇ ವರ್ಷದ ಮೇಳ ಶನಿವಾರ ಬೆಳಿಗ್ಗೆ 9.30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಸಂಘಟಕರಾದ ಸ್ವಾತಿ ತಿಳಿಸಿದರು.
ಅವರೆ ಬೇಳೆ ಹೋಳಿಗೆ, ವಡೆ, ಉಸುಳಿ, ನೀರು ದೋಸೆ ಜತೆಗೆ ಅವರೆ ಬೇಳೆ ಸಾರು, ಪಾಯಸ, ಕುನಾಫ ಕೇಕ್ ಸಹಿತ ಹಲವು ಖಾದ್ಯಗಳು ಮೇಳದಲ್ಲಿ ಸಿಗಲಿವೆ. ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ಮೇಳ ಇರಲಿದ್ದು, ಉಚಿತ ಪ್ರವೇಶವಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.