ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಬಹುವಚನ ಪ್ರಕಾಶನ ಮತ್ತು ನಾಟಕ ಕಂಪನಿ ತಮಾಶಾ ಸ್ಟುಡಿಯೊ ಫೌಂಡೇಶನ್‌ನಿಂದ ಜಂಟಿಯಾಗಿ ಸ್ಥಾಪಿಸಲಾದ ನಾಟಕ ಅನುವಾದ ಫೆಲೋಶಿಪ್‌ಗೆ ಅನುವಾದಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮೂವರು ಅನುವಾದಕರಿಗೆ ಫೆಲೋಶಿಪ್ ನೀಡಲಾಗುವುದು. ಇಬ್ಬರು ಭಾಷಾಂತರಕಾರರು ಜೊತೆಗೂಡಿ ಭಾಷಾಂತರ ಮಾಡುವ ಉದ್ದೇಶ ಹೊಂದಿದ್ದರೆ, ಅಂಥ ಅರ್ಜಿಗಳನ್ನು ಸಹ ಸ್ವೀಕರಿಸಲಾಗುವುದು.
ಫೆಲೋಶಿಪ್ 15 ದಿನಗಳ ವಸತಿಯನ್ನು (ರೆಸಿಡೆನ್ಸಿ) ಒಳಗೊಂಡಿರುತ್ತದೆ. ಫೆಲೋಶಿಪ್ ಮೊತ್ತ ₹ 30,000ವನ್ನು ಅಂತಿಮ ಹಸ್ತಪ್ರತಿಯನ್ನು ಸಲ್ಲಿಸಿದ ಮೇಲೆ ಪಾವತಿಸಲಾಗುವುದು.
ವಸತಿಯು ಬೆಂಗಳೂರಿಗೆ ಸಮೀಪವಿರುವ ಸ್ಥಳದಲ್ಲಿರುತ್ತದೆ, ಅನುವಾದಕರ ಊಟ, ವಸತಿ ಮತ್ತು ಪ್ರಯಾಣದ ವೆಚ್ಚವನ್ನು ಬಹುವಚನ ಪ್ರಕಾಶನವು ಭರಿಸುತ್ತದೆ.
ಮರಾಠಿ ನಾಟಕಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಈ ಯೋಜನೆಗೆ ಅರ್ಜಿದಾರರು ಎರಡೂ ಭಾಷೆಗಳ ಜ್ಞಾನವನ್ನು ಹೊಂದಿರಬೇಕು. ಫೆಲೋಶಿಪ್‌ಗೆ ಆಯ್ಕೆಯಾದವರು ರೆಸಿಡೆನ್ಸಿಯ ಸಮಯದಲ್ಲಿ ಅನುವಾದದ ಮೊದಲನೇ ಡ್ರಾಫ್ಟ್ ಅನ್ನು ಪೂರ್ಣಗೊಳಿಸಿರಬೇಕು. ಭಾಷಾಂತರವನ್ನು ರೆಸಿಡೆನ್ಸಿಯ ನಂತರದ ಮೂರು ವಾರಗಳಲ್ಲಿ ಅಂತಿಮಗೊಳಿಸಿ ಸಲ್ಲಿಸಬೇಕು. ಈ ಎಲ್ಲ ಅನುವಾದಿತ ನಾಟಕಗಳನ್ನು ಬಹುವಚನ ಪ್ರಕಾಶನವು ಪ್ರಕಟಿಸಲಿದೆ.
ಅರ್ಜಿ ಸಲ್ಲಿಸುವುದು ಹೇಗೆ: ನಿಮ್ಮ ಅರ್ಜಿಗಳನ್ನು ಸಂಕ್ಷಿಪ್ತ ಪರಿಚಯದೊಂದಿಗೆ ಕಳುಹಿಸಬೇಕು, ಅನುವಾದ ಕ್ಷೇತ್ರದಲ್ಲಿ ಈವರೆಗಿನ ನಿಮ್ಮ ಕೆಲಸ ಮತ್ತು ಪ್ರಸ್ತುತ ಯೋಜನೆಯಲ್ಲಿ ನಿಮ್ಮ ಆಸಕ್ತಿಯನ್ನು ತಿಳಿಸಬೇಕು.
1000 ಪದಗಳಿಗಿಂತ ಹೆಚ್ಚಿಲ್ಲದ ಎರಡು ಮಾದರಿ ಅನುವಾದಗಳನ್ನು ಕಳುಹಿಸಬೇಕು. ಮಾದರಿಗಳಲ್ಲಿ ಒಂದು ನಾಟಕ ಸಾಹಿತ್ಯ ಪ್ರಕಾರದಲ್ಲಿರಬೇಕು. ಅನುವಾದಗಳು ಕನ್ನಡದಲ್ಲಿರಬೇಕು.
ಆಯ್ಕೆಯಾದ ಎಲ್ಲ ಅರ್ಜಿದಾರರಿಗೆ ನಾಟಕದ ಒಂದು ಆಯ್ದ ಭಾಗವನ್ನು ಅನುವಾದಿಸಲು ಕಳುಹಿಸಲಾಗುವುದು. ಇದರ ಆಧಾರದ ಮೇಲೆ ಅಂತಿಮ ನಿರ್ಣಯವನ್ನು ಕೈಗೊಳ್ಳಲಾಗುವುದು.
ನುಡಿ, ಪಾರಿಜಾತದಲ್ಲಿ ಟೈಪ್ ಮಾಡಿದ ಅಂತಿಮ ಹಸ್ತಪ್ರತಿಯು ದೋಷ ಮುಕ್ತವಾಗಿರಬೇಕು ಹಾಗೂ ಸಾಫ್ಟ್ ಕಾಪಿಯನ್ನು ಕಳುಹಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 28, 2025.
ಅರ್ಜಿಗಳನ್ನು ಈ ಕೆಳಕಂಡ ಇ–ಮೇಲ್ ವಿಳಾಸಕ್ಕೆ ಕಳುಹಿಸಬೇಕು.
ಇ–ಮೇಲ್: bahuvachanatamaasha@gmail.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.