ADVERTISEMENT

ಚಾಕೊಲೇಟ್‌ ಸಮೇತ ಕ್ಯಾಮೆರಾ ಕದ್ದೊಯ್ದ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 22:22 IST
Last Updated 11 ಜನವರಿ 2020, 22:22 IST

ಬೆಂಗಳೂರು: ಶಾಂತಿನಗರದ ಲಕ್ಷ್ಮಿ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ಕಳ್ಳತನ ಎಸಗಿರುವ ದುಷ್ಕರ್ಮಿಗಳು, ಚಾಕೊಲೇಟ್‌ ಜೊತೆ ಬೇಕರಿಯ ಸಿ.ಸಿ.ಟಿ.ವಿ ಕ್ಯಾಮೆರಾವನ್ನೂ ಕದ್ದುಕೊಂಡು ಹೋಗಿದ್ದಾರೆ.

ಕಳ್ಳತನ ಸಂಬಂಧ ‘ಸಪ್ನ ಮ್ಯಾಜಿಕ್ ಓವನ್’ ಬೇಕರಿಯ ಪಾಲುದಾರ ಪಿ.ಕೆ. ಫಹೀದ್ ಎಂಬುವರು ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ.

‘ಜ. 9ರಂದು ರಾತ್ರಿ ಯಾರೋ ದುಷ್ಕರ್ಮಿಗಳು ಬೇಕರಿಯ ಷಟರ್ ಬಾಗಿಲು ತೆರೆದು ಕೃತ್ಯ ಎಸಗಿದ್ದಾರೆ. ₹45 ಸಾವಿರ ನಗದು, ₹5 ಸಾವಿರ ಮೌಲ್ಯದ ಚಾಕೊಲೇಟ್ ಕದ್ದಿದ್ದಾರೆ. ಅದರ ಜೊತೆಗೆಸಿ.ಸಿ.ಟಿ.ವಿ ಕ್ಯಾಮೆರಾದ ಡಿವಿಆರ್ ಹಾಗೂ ಹಾರ್ಡ್‌ ಡಿಸ್ಕ್‌ ಸಹ ಕದ್ದೊಯ್ದಿದ್ದಾರೆ’ ಎಂದು ದೂರಿನಲ್ಲಿ ಫಹೀದ್ ತಿಳಿಸಿದ್ದಾರೆ.

ADVERTISEMENT

‘ಲಕ್ಷ್ಮಿ ರಸ್ತೆಯಲ್ಲಿರುವ ಜಬ್ಬೀರ್ ಹುಸೇನ್ ಎಂಬುವರ ಲಸ್ಸಿ ಮಳಿಗೆಯಲ್ಲೂ ಕಳ್ಳತನ ಆಗಿದೆ. ಇದೊಂದು ಸರಣಿ ಕಳ್ಳತನದಂತೆ ಕಾಣುತ್ತಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.