ADVERTISEMENT

ಬಾಲಮಂದಿರದ ಬಾಲಕರು ಪರಾರಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2018, 20:03 IST
Last Updated 2 ನವೆಂಬರ್ 2018, 20:03 IST

ಬೆಂಗಳೂರು: ನಗರದ ಮಡಿವಾಳ ಬಾಲಮಂದಿರದಲ್ಲಿದ್ದ ಐವರು ಬಾಲಕರು ಶುಕ್ರವಾರ ಬೆಳಿಗ್ಗೆ ಪರಾರಿಯಾಗಿದ್ದು, ಅವರಿಗಾಗಿ ಮಡಿವಾಳ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಬಾಲಕರೆಲ್ಲ 16ರಿಂದ 18 ವಯಸ್ಸಿನವರಾಗಿದ್ದು, ಬಾಲಮಂದಿರದ ಮುಖ್ಯ ಬಾಗಿಲು ಮೂಲಕವೇ ಅವರು ಹೊರಗೆ ಹೋಗಿದ್ದಾರೆ ಎನ್ನಲಾಗಿದೆ.

‘ಬಾಲಕರು ಪರಾರಿಯಾದ ಬಗ್ಗೆ ಬಾಲಮಂದಿರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಲವು ಮಕ್ಕಳ ಬಗ್ಗೆ ಮಾಹಿತಿ ಸಿಕ್ಕಿದೆ. ಉಳಿದವರನ್ನು ಹುಡುಕುತ್ತಿದ್ದೇವೆ’ ಎಂದು ಮಡಿವಾಳ ಪೊಲೀಸರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.