ADVERTISEMENT

ಬಲಿಜ ಸಮುದಾಯಕ್ಕೆ ರಾಜಕೀಯ, ಉದ್ಯೋಗದಲ್ಲಿ 2ಎ ಮೀಸಲಾತಿಗೆ ಆಗ್ರಹ: 27ಕ್ಕೆ ಸಭೆ

ಬೆಂಗಳೂರಿನಲ್ಲಿ 27ಕ್ಕೆ ‘ಬಲಿಜ ಸಂಕಲ್ಪ ಸಭೆ’

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 22:00 IST
Last Updated 24 ಜನವರಿ 2023, 22:00 IST

ಮೈಸೂರು: ‘ಬಲಿಜ ಸಮುದಾಯಕ್ಕೆ ರಾಜಕೀಯ ಮತ್ತು ಉದ್ಯೋಗ ಕ್ಷೇತ್ರದಲ್ಲಿ 2ಎ ಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಜ.27ರಂದು ‘ಬಲಿಜ ಸಂಕಲ್ಪ ಸಭೆ’ ಆಯೋಜಿಸಲಾಗಿದೆ’ ಎಂದು ಯೋಗಿ ನಾರೇಯಣ ಬಣಜಿಗ(ಬಲಿಜ) ಸಂಘದ ಗೌರವಾಧ್ಯಕ್ಷ ಎಚ್.ಎ.ವೆಂಕಟೇಶ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘2ಎ ಪ್ರವರ್ಗದಲ್ಲಿದ್ದ ಬಲಿಜರನ್ನು ವೈಜ್ಞಾನಿಕ ಮಾನದಂಡವಿಲ್ಲದೆ 3ಎ ಗೆ ವರ್ಗಾಯಿಸಿದ್ದನ್ನು ವಿರೋಧಿಸಿ ನಡೆಸಿದ ಸತತ ಹೋರಾಟದಿಂದ 2011ರಲ್ಲಿ ಶಿಕ್ಷಣದಲ್ಲಿ 2ಎ ಮೀಸಲಾತಿ ದೊರೆಯಿತು. ಆದರೆ ಇದೂ ಅಪೂರ್ಣವೇ’ ಎಂದು ಪ್ರತಿಪಾದಿಸಿದರು.

‘ಪ್ರತಿ 10ವರ್ಷಕ್ಕೊಮ್ಮೆ ಸಮುದಾಯದ ಸ್ಥಿತಿ–ಗತಿಗಳನ್ನು ಅರಿತು ಮಿಸಲಾತಿ ಪರಿಷ್ಕರಿಸುವ ಕೆಲಸ ನಡೆದಿಲ್ಲ. 40ರಿಂದ 50 ಲಕ್ಷ ಜನಸಂಖ್ಯೆಯುಳ್ಳ ಬಲಿಜ ಸಮುದಾಯದಲ್ಲಿ ಜನಪ್ರತಿನಿಧಿಗಳೇ ಇಲ್ಲ. ಸರ್ಕಾರಿ ಗುಮಾಸ್ತರ ಕೆಲಸವೂ ಸಿಕ್ಕಿಲ್ಲ’ ಎಂದು ವಿಷಾದಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ‘ಬಲಿಜ ಸಂಕಲ್ಪ ಸಭೆ’ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.