ADVERTISEMENT

ಬೆಂಗಳೂರು | ಉಪ್ಪಾರಪೇಟೆ ಠಾಣೆ ಪಿಎಸ್‌ಐಗೂ ಕೊರೊನಾವೈರಸ್

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 10:33 IST
Last Updated 30 ಜೂನ್ 2020, 10:33 IST
   

ಬೆಂಗಳೂರು: ನಗರದ ಕೇಂದ್ರ ಭಾಗದಲ್ಲಿರುವ ಉಪ್ಪಾರಪೇಟೆ ಠಾಣೆ ಪಿಎಸ್‌ಐಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮೆಜೆಸ್ಟಿಕ್ ನಿಲ್ದಾಣ ಬಳಿಯೇ ಉಪ್ಪಾರಪೇಟೆ ಠಾಣೆ ಇದೆ. ಈ ಠಾಣೆ ಕಟ್ಟಡದಲ್ಲೇ ಪಶ್ಚಿಮ ವಿಭಾಗದ ಡಿಸಿಪಿ ಕಚೇರಿ ಇದ್ದು, ಅಲ್ಲಿಯ ಹೆಡ್ ಕಾನ್‌ಸ್ಟೆಬಲೊಬ್ಬರಲ್ಲಿ ಇತ್ತೀಚೆಗೆ ಸೋಂಕು ಕಾಣಿಸಿಕೊಂಡಿತ್ತು.ಕಚೇರಿಯನ್ನೇ ಸೀಲ್‌ಡೌನ್ ಮಾಡಲಾಗಿತ್ತು.

ಇದೀಗ ಉಪ್ಪಾರಪೇಟೆ ಠಾಣೆ ಪಿಎಸ್‌ಐಯೊಬ್ಬರಿಗೆ ಸೋಂಕು ತಗುಲಿದ್ದರಿಂದ, ಠಾಣೆಯನ್ನೂ ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.