ಬೆಂಗಳೂರು: ನಗರದಲ್ಲಿ ಸುತ್ತಾಡಿ ಐಷಾರಾಮಿ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಆರೋಪದಡಿ ತಮಿಳುನಾಡಿನ ಇಬ್ಬರು ಯುವಕರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪೆರಿಯಾಸ್ವಾಮಿ ಅಲಿಯಾಸ್ ಬಾಯ್ (20) ಹಾಗೂ ಹರೀಶ್ ಅಲಿಯಾಸ್ ಹರಿ (21) ಬಂಧಿತರು. ಆರೋಪಿಗಳಿಂದ ರಾಯಲ್ ಎನ್‌ಫೀಲ್ಡ್, ಯಮಹಾ, ಕೆಟಿಎಂ ಡ್ಯೂಕ್ ಸೇರಿ ಒಟ್ಟು ₹ 8 ಲಕ್ಷ ಮೌಲ್ಯದ 5 ಬೈಕ್‌ಗಳನ್ನು
ವಶಪಡಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.