
ವಿದ್ಯಾಭೂಷಣರಿಂದ ಸಂಗೀತ ಕಛೇರಿ
ಬೆಂಗಳೂರು: ಹಜಾರಿ ಪ್ರಸಾದ್ ಫೌಂಡೇಷನ್ ವತಿಯಿಂದ ಅಂಧರು ಮತ್ತು ಅವಕಾಶ ವಂಚಿತ ಕಲಾವಿದರ ವೈದ್ಯಕೀಯ ನೆರವಿಗಾಗಿ ಇದೇ 30ರಂದು ಸಂಜೆ 5.30ಕ್ಕೆ ಚೌಡಯ್ಯ ಸ್ಮಾರಕ ಭವನದಲ್ಲಿ ವಿದ್ಯಾಭೂಷಣ ಅವರಿಂದ ಸಂಗೀತ ಕಛೇರಿ ನಡೆಯಲಿದೆ.
ನಿಧಿ ಸಂಗ್ರಹಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಶುಭಾ ಧನಂಜಯ್, ಲಹರಿ ಸಂಸ್ಥೆಯ ಲಹರಿ ವೇಲು ಹಾಗೂ ಹಜಾರಿ ಪ್ರಸಾದ್ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿಶ್ವನಾಥ್ ಪ್ರಸಾದ್ ಎಚ್. ಭಾಗವಹಿಸುತ್ತಾರೆ. ಇದೇ ವೇಳೆ ಗಾಯಕ ವಿದ್ಯಾಭೂಷಣ, ಭರತನಾಟ್ಯ ಕಲಾವಿದೆ ಲಲಿತಾ ಶ್ರೀನಿವಾಸನ್ ಹಾಗೂ ಹಿಂದೂಸ್ತಾನಿ ಗಾಯಕ ಶಂಕರಪ್ಪ ಲಕ್ಷ್ಮಪ್ಪ ಬೆಲ್ಹಾರ ಅವರಿಗೆ ‘ಕಲಾ ಸೇವಾ ಪುರಸ್ಕಾರ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಟಿಕೆಟ್‌ಗಳು ರಿದಮ್ಸ್ ಅಕಾಡೆಮಿಯ ಕೇಂದ್ರಗಳು ಹಾಗೂ ಬುಕ್ ಮೈಶೋದಲ್ಲಿ ಲಭ್ಯ. ಸಂಪರ್ಕಕ್ಕೆ: 8217651966 ಅಥವಾ 7618778555
–0–
‘ರಾಮ ಶಾಮ ಡ್ರಾಮ’ ನಾಟಕ
ಬೆಂಗಳೂರು: ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡವು ಇದೇ 29ರಂದು ಸಂಜೆ 7.30ಕ್ಕೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ರಾಮ ಶಾಮ ಡ್ರಾಮ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.
ರಾಜೇಂದ್ರ ಕಾರಂತ ಅವರು ಈ ನಾಟಕ ರಚಿಸಿ, ನಿರ್ದೇಶಿಸಿದ್ದಾರೆ. ದೇವರೇ ಗತಿ ಆ್ಯಕ್ಸಿಡೆಂಟ್ ಆ್ಯಂಡ್ ಎಮರ್ಜೆನ್ಸಿ ಸೆಂಟರ್‌ನಲ್ಲಿ ಕೆಲಸ ಮಾಡುವ ವೈದ್ಯ ರಾಮ್, ಸಹಾಯಕ ಶಾಮ ಮತ್ತು ಸ್ವಾಗತಕಾರ ಭಾಮ ಹಾಗೂ ಚಿತ್ರ ವಿಚಿತ್ರ ಸಮಸ್ಯೆಗಳನ್ನು ಹೊತ್ತು ಆಸ್ಪತ್ರೆಗೆ ಬರುವ ರೋಗಿಗಳ ನಡುವೆ ನಡೆಯುವ ಹಾಸ್ಯ ಸನ್ನಿವೇಶಗಳೇ ನಾಟಕದ ಕಥಾವಸ್ತು. ಟಿಕೆಟ್‌ಗಳು ಬುಕ್ ಮೈ ಶೋನಲ್ಲಿ ಲಭ್ಯ.
ಸಂಪರ್ಕಕ್ಕೆ: 9945977184 ಅಥವಾ 9916863637
–0–
‘ಸ್ವರನಮನ’ ಗಾಯನ–ಭಕ್ತಿ ಸಂಗೀತ
ಬೆಂಗಳೂರು: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಟ್ರಸ್ಟ್ ಸರಸ್ವತಿ ಮತ್ತು ದತ್ತಾತ್ರೇಯ ಹಂಪಿಹೊಳಿ ಸ್ಮರಣಾರ್ಥ ಇದೇ 30ರಂದು ಸಂಜೆ 5.30ಕ್ಕೆ ತ್ಯಾಗರಾಜನಗರದಲ್ಲಿರುವ ದತ್ತಾತ್ರೇಯ ದೇವಸ್ಥಾನದಲ್ಲಿ ‘ಸ್ವರನಮನ’ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮುಖ್ಯ ಅತಿಥಿಗಳಾಗಿ ಲಕ್ಷ್ಮೀ ನಾಗರಾಜ್ ಹಾಗೂ ನಟ ತಬಲಾ ನಾಣಿ ಭಾಗವಹಿಸಲಿದ್ದಾರೆ. ಉಮಾ ಕುಲಕರ್ಣಿ, ಸುಮನಾ ಕಡೇಕಾರ್, ರಶ್ಮಿ ಶಶಿಧರ್ ಹಾಗೂ ಶಿವರಂಜನಿ ಅವರಿಂದ ಭಕ್ತಿ ಸಂಗೀತ, ವೈಸಿರಿ ಎನ್. ಆತ್ರೇಯ ಅವರಿಂದ ಭಕ್ತಿ ಸಿಂಚನ, ಗುರುರಾಜ ಹೊಳೆನರಸೀಪುರ ಅವರಿಂದ ತಬಲಾ ವಾದನ, ನಾಗೇಂದ್ರ ರಾಣಾಪೂರ್ ಮತ್ತು ವೃಂದದಿಂದ ದತ್ತ ಗೀತಾಂಜಲಿ, ವಿನೀತ್ ರಾಣಾಪೂರ್ ಅವರಿಂದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸತೀಶ್ ಹಂಪಿಹೊಳಿ, ಶಿವಕುಮಾರ್ ಮಹಾಂತ್, ಅಮೃತೇಶ್ ಕುಲಕರ್ಣಿ, ನಾಗಶಯನ ಬಿ., ಗೌತಮ್ ಕಾರ್ಕಳ, ಪುನೀತ್ ರಾಣಾಫೂರ್, ಸುತೇಜ್ ಆರ್. ಹರಿತ್ಸ ಹಾಗೂ ರೋಗನ್ ಕುಮಾರ್ ಅವರು ವಾದ್ಯ ಸಹಕಾರ ನೀಡಲಿದ್ದಾರೆ.
–0–
ಕನ್ನಡ ಸಂಸ್ಕೃತಿ ಸಂಭ್ರಮ
ಬೆಂಗಳೂರು: ಹೆಣ್ಣೂರು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟವು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಇದೇ 29ರಂದು ಹೆಣ್ಣೂರು ಬಂಡೆಯ ಭೈರವೇಶ್ವರ ಬಡಾವಣೆಯಲ್ಲಿ ಕನ್ನಡ ಸಂಸ್ಕೃತಿ ಸಂಭ್ರಮ ಹಮ್ಮಿಕೊಂಡಿದೆ.
ಸಂಜೆ 4.30ಕ್ಕೆ ಹೆಣ್ಣೂರು ಕ್ರಾಸ್‌ನಿಂದ ವೇದಿಕೆಯವರೆಗೆ ಜಾಗೃತಿ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಯಿಂದ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಕಲಾ ತಂಡಗಳಿಂದ ಜಾನಪದ ನೃತ್ಯ, ಗೀತಗಾನ ಪ್ರಸ್ತುತಿ, ಚಿತ್ರಗೀತೆಗಳಿಗೆ ನೃತ್ಯ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
–0–
ಪ್ರತಿ ಗುರುವಾರ ಪ್ರಕಟವಾಗುವ ‘ಸಾಂಸ್ಕೃತಿಕ ಮುನ್ನೋಟ’ ಅಂಕಣದಲ್ಲಿ ಪ್ರಕಟಿಸಲು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವರಗಳನ್ನು ಈ ಕೆಳಗಿನ ಇ–ಮೇಲ್‌ಗೆ (ಬುಧವಾರ ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.