ADVERTISEMENT

ಪುಷ್ಪ ಪ್ರದರ್ಶನ: ಎಲ್ಲರನ್ನು ಆಕರ್ಷಿಸುತ್ತಿದ್ದಾರೆ ‘ಫ್ಲವರ್’ ಸ್ಟಾರ್ ಅಪ್ಪು!

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 16:02 IST
Last Updated 5 ಆಗಸ್ಟ್ 2022, 16:02 IST

ಸ್ವಾತಂತ್ರ್ಯೋತ್ಸವ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿರುವ ಪುಷ್ಪ ಪ್ರದರ್ಶನಕ್ಕೆ ಶುಕ್ರವಾರದಿಂದ (ಆ.5) ಅದ್ಧೂರಿ ಚಾಲನೆ ದೊರೆತಿದ್ದು, ಆಗಸ್ಟ್‌ 15ರವರೆಗೆ ನಡೆಯಲಿದೆ.

ವರನಟ ಡಾ. ರಾಜ್‌ಕುಮಾರ್‌ ಅವರ ಅಭಿನಯದ ಪ್ರಮುಖ ಚಿತ್ರಗಳ ಪಾತ್ರಗಳು ಪ್ರತಿಮೆಗಳು ನೋಡುಗರನ್ನು ಆಕರ್ಷಿಸುತ್ತಿವೆ. ಭಕ್ತಿಗೆ ‘ಬ್ರ್ಯಾಂಡ್ ಅಂಬಾಸಿಡರ್‌’ ಎನಿಸಿರುವ ಬೇಡರ ಕಣ್ಣಪ್ಪನ ಪಾತ್ರದ ಪ್ರತಿಮೆ ಕಣ್ಮನ ಸೆಳೆಯುತ್ತಿದೆ. ಅಮ್ಮ–ಅಪ್ಪನ ಮಡಿಲಲ್ಲಿ ಮುದ್ದಾಗಿ ನಗುತ್ತಿದ್ದಾರೆ ಪ್ರೀತಿಯ ಅಪ್ಪು. ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಫಲಪುಷ್ಪ ಪ್ರದರ್ಶನ ಇರಲಿದೆ.

ವಯಸ್ಕರಿಗೆ 70 ರೂಪಾಯಿ, ರಜೆ ದಿನಗಳಲ್ಲಿ 75 ರೂಪಾಯಿ, ಮಕ್ಕಳಿಗೆ 25 ರೂಪಾಯಿ ಪ್ರವೇಶ ಶುಲ್ಕ ನಿಗದಿಮಾಡಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.