ADVERTISEMENT

ಬೆಂಗಳೂರು | ನಕಲಿ ದಾಖಲೆ ಸೃಷ್ಟಿಸಿ ಭೂಗಳ್ಳತನ: ನ್ಯಾಯಕ್ಕಾಗಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 14:33 IST
Last Updated 29 ಅಕ್ಟೋಬರ್ 2025, 14:33 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ನಗರದ ಮುನ್ನೇನಕೊಳಾಲು ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬಡವರ ಜಮೀನನ್ನು ಭೂಗಳ್ಳತನ ಮಾಡಲಾಗಿದೆ. ಈ ಜಮೀನನ್ನು ಬಡವರಿಗೆ ವಾಪಸ್‌ ನೀಡಬೇಕು. ನಕಲಿ ದಾಖಲೆ ಸೃಷ್ಟಿಸಿರುವ ಅಧಿಕಾರಿಗಳು ಹಾಗೂ ಭೂಗಳ್ಳರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್‌ ಸೇವಾ ಸಮಿತಿ ಆಗ್ರಹಿಸಿದೆ.

1963ರಲ್ಲಿ 21 ದಲಿತ ಕುಟುಂಬಗಳಿಗೆ 21 ಎಕರೆ ಜಮೀನು ಮಂಜೂರಾಗಿತ್ತು. 1980ರಲ್ಲಿ ಸ್ಥಳೀಯ ಭೂಮಾಲೀಕ ಹಲ್ಲೆ ನಡೆಸಿ ದಲಿತ ಕುಟುಂಬವನ್ನು ಓಡಿಸಿ ಅಕ್ರಮವಾಗಿ ಕೃಷಿ ಮಾಡಲು ಆರಂಭಿಸಿದ್ದರು. ಇದರ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿತ್ತು. 2011ರಲ್ಲಿ ಮಂಜೂರುದಾರರ ಪರವಾಗಿ ತೀರ್ಪು ನೀಡಿತ್ತು. ಆದರೆ, 2012ರಲ್ಲಿ 21 ಕುಟುಂಬದವರಿಗೆ ಯಾವುದೇ ಮಾಹಿತಿ ನೀಡದೇ ಉಪ ವಿಭಾಗಾಧಿಕಾರಿಯು ಭೂಗಳ್ಳರ ಪರವಾಗಿ ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಕೆ.ಎಂ. ಸಂದೇಶ್‌ ಸುದ್ದಿಗೋಷ್ಠಿಯಲ್ಲಿ ದೂರಿದರು.

ADVERTISEMENT

ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಗಿದೆ. 45 ದಿನಗಳ ಒಳಗೆ ಸರಿಡಪಡಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.