ADVERTISEMENT

ಬೆಂಗಳೂರು: ₹ 40 ಲಕ್ಷ ಮೌಲ್ಯದ 48 ಲ್ಯಾಪ್‌ಟಾಪ್‌ ಜಪ್ತಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 16:24 IST
Last Updated 6 ಜನವರಿ 2026, 16:24 IST
ಗೌತಮ್‌ 
ಗೌತಮ್‌    

ಬೆಂಗಳೂರು: ಪೇಯಿಂಗ್‌ ಗೆಸ್ಟ್‌, ಹಾಸ್ಟೆಲ್‌ ಹಾಗೂ ಕಾಲೇಜುಗಳಿಗೆ ನುಗ್ಗಿ ಲ್ಯಾಪ್‌ಟಾಪ್‌ ಕಳ್ಳತನ ಮಾಡುತ್ತಿದ್ದ ತಮಿಳುನಾಡಿನ ಇಬ್ಬರು ಆರೋಪಿಗಳನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಚೆನ್ನೈನ ಗೌತಮ್‌ (36) ಹಾಣ್ ರಾಜ ದೊರೈ (33) ಬಂಧಿತರು.

ಬಂಧಿತರಿಂದ ₹40 ಲಕ್ಷ ಮೌಲ್ಯದ ವಿವಿಧ ಕಂಪನಿಯ 48 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಠಾಣಾ ವ್ಯಾಪ್ತಿಯ ದೊಡ್ಡ ತೇಗೂರಿನ ಅಬ್ಬಯ್ಯ ಸ್ಟ್ರೀಟ್‌ನ ಪಿ.ಜಿಯಲ್ಲಿ ನೆಲಸಿದ್ದ ವ್ಯಕ್ತಿಯೊಬ್ಬರ ಲ್ಯಾಪ್‌ಟಾಪ್ ಕಳ್ಳತನವಾಗಿತ್ತು. ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ತಮಿಳುನಾಡಿನಿಂದ ಬಸ್‌ನಲ್ಲಿ ಬರುತ್ತಿದ್ದ ರಾಜ ದೊರೈ, ನಗರದ ವಿವಿಧೆಡೆ ಸಂಚರಿಸಿ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡುತ್ತಿದ್ದ. ಕದ್ದ ಲ್ಯಾಪ್‌ಟಾಪ್‌ಗಳನ್ನು ಗೌತಮ್‌ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.