ADVERTISEMENT

ಬೆಂಗಳೂರು: ಇಂದಿನಿಂದ ವಿದ್ಯುತ್‌ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 19:51 IST
Last Updated 11 ಅಕ್ಟೋಬರ್ 2021, 19:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಬೆಸ್ಕಾಂ ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಅ.12 ಮತ್ತು 13ರಂದುಬೆಳಿಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವ್ಯತ್ಯಯವಾಗುವ ಸ್ಥಳಗಳು:12ರಂದು ಸಿಂಗಸಂದ್ರ, ದೊಡ್ಡತೋಗೂರು, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ಗೊಟ್ಟಿಗೆರೆ, ಸುರಭಿ ನಗರ, ಎಚ್‌ಎಸ್‌ಆರ್‌ ಬಡಾವಣೆ, ಗೋವಿಂದರಾಜ ನಗರ, ನಾಗರಬಾವಿ, ಚಂದ್ರಾ ಬಡಾವಣೆ, ಬಸವೇಶ್ವರ ನಗರ, ಕಾಮಾಕ್ಷಿಪಾಳ್ಯ, ಹಂಪಿನಗರ, ಹೊಸಹಳ್ಳಿ, ವಿಜಯನಗರ, ಮಲ್ಲತ್ತಹಳ್ಳಿ, ಮಾರೇನಹಳ್ಳಿ, ದೊಡ್ಡಬಸ್ತಿ ಮುಖ್ಯರಸ್ತೆ, ಮಾರುತಿ ನಗರ, ವಿಘ್ನೇಶ್ವರ ನಗರ.

13ರಂದು ಲಕ್ಷ್ಮಿ ಬಡಾವಣೆ, ಕಮ್ಮನಹಳ್ಳಿ, ದೊಡ್ಡಮ್ಮ ಬಡಾವಣೆ, ಪಾಂಡುರಂಗ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.