
ಪ್ರಜಾವಾಣಿ ವಾರ್ತೆ
ಬೆಂಗಳೂರು: ಸಾಂಸ್ಕೃತಿಕ ಚಳವಳಿಯ ಸಂಘಟನೆ ‘ಬೆಂಗಳೂರು ಸಮುದಾಯ’ದ ಅಧ್ಯಕ್ಷರಾಗಿ ಚಿಂತಕ ಬಂಜಗೆರೆ ಜಯಪ್ರಕಾಶ್ ಹಾಗೂ ಕಾರ್ಯಾಧ್ಯಕ್ಷರಾಗಿ ಜನಪರ ಚಳವಳಿಗಾರ ಮಂಜುನಾಥ್ ಬಿ.ಆರ್. ಅವರು ಆಯ್ಕೆಯಾಗಿದ್ದಾರೆ.
ನಗರದಲ್ಲಿ ಗುರುವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ನೂತನ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಸಂಘಟನೆಯ ಉಪಾಧ್ಯಕ್ಷರಾಗಿ ಎನ್.ಎಸ್. ಸನತ್ ಕುಮಾರ್, ಪದ್ಮಾ ಶಿವಮೊಗ್ಗ, ಕಾರ್ಯದರ್ಶಿಯಾಗಿ ಸಂಗಮೇಶ ಶಿವಣಗಿ, ಖಜಾಂಚಿಯಾಗಿ ಫೈರೋಜ್ ಕೆ., ಜಂಟಿ ಕಾರ್ಯದರ್ಶಿಗಳಾಗಿ ನಾಗಲಕ್ಷ್ಮಿ, ಎಂ. ಅನಂತು ಶಾಂದ್ರೇಯ, ಸದಸ್ಯರಾಗಿ ಸಿ.ಕೆ.ಗುಂಡಣ್ಣ, ಜೆ.ಸಿ. ಶಶಿಧರ, ಕಾವ್ಯ ಅಚ್ಯುತ್, ಪ್ರಣವ್ ವಿ. ಕಿಶನ್, ಎಂ.ವಿ.ಸುರೇಶ್, ದಿಲೀಪ್, ರವೀಂದ್ರನಾಥ ಸಿರಿವರ, ರವಿಕುಮಾರ್ ಬಾಗಿ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.