ADVERTISEMENT

ಬೆಂಗಳೂರು ವಿಶ್ವವಿದ್ಯಾಲಯ: ಒಂಬತ್ತು ವರ್ಷದ ಬಳಿಕ ತೃತೀಯ ಲಿಂಗಿಗಳ ಪ್ರವೇಶ?

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 19:48 IST
Last Updated 29 ಆಗಸ್ಟ್ 2019, 19:48 IST
   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ತೃತೀಯ ಲಿಂಗಿಗಳಿಗೂ ಸೀಟು ಮೀಸಲಿಟ್ಟ 9 ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ಎರಡು ಅರ್ಜಿಗಳು ಬಂದಿವೆ.

2019–20ನೇ ಸಾಲಿನಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಇದೀಗ ನಡೆಯುತ್ತಿರುವ ಪ್ರವೇಶ/ ಕೌನ್ಸೆಲಿಂಗ್‌ ಪ್ರಕ್ರಿಯೆಯ ವೇಳೆ ಈ ಬೆಳವಣಿಗೆ ನಡೆದಿದೆ. ಆದರೆ ಅರ್ಜಿಗಳ ಜತೆಗೆ ಅಗತ್ಯದ ದಾಖಲೆಪತ್ರಗಳನ್ನು ಅವರು ಅಪ್‌ಲೋಡ್‌ ಮಾಡಿಲ್ಲ.

‘ಅರ್ಜಿ ಹಾಕಿದವರು ಇಲ್ಲಿಗೆ ಬರಲಿ, ಅಲ್ಲಿಯವರೆಗೆ ಅವರ ಅರ್ಜಿಯನ್ನು ನಾವು ತಿರಸ್ಕರಿಸುವುದಿಲ್ಲ. ನಿಗದಿತ ಅವಧಿಯ ಬಳಿಕ ಬಂದರೂ ಸಹ ಅವರಿಗೆ ಪ್ರವೇಶ ನೀಡಲಾಗುವುದು’ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

2010ರಲ್ಲಿ ಡಾ.ಎನ್‌.ಪ್ರಭುದೇವ ಅವರು ಕುಲಪತಿಯಾಗಿದ್ದ ವೇಳೆ ತೃತೀಯ ಲಿಂಗಿಗಳಿಗೆ ಒಂದೊಂದು ವಿಭಾಗದಲ್ಲಿ ಒಂದೊಂದು ಸೀಟು ಕಾಯ್ದಿರಿಸುವ ಮೀಸಲಾತಿ ವ್ಯವಸ್ಥೆ ಜಾರಿಗೆ ಬಂದಿತ್ತು. ಇಲ್ಲಿ 60ಕ್ಕೂ ಅಧಿಕ ಸ್ನಾತಕೋತ್ತರ ವಿಭಾಗಗಳಿದ್ದು, ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.