ADVERTISEMENT

ಬೆಂಗಳೂರು ವಿ.ವಿ ಪರೀಕ್ಷೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 19:03 IST
Last Updated 7 ಜನವರಿ 2019, 19:03 IST

ಬೆಂಗಳೂರು: ಭಾರತ ಬಂದ್‌ ಪ್ರಯುಕ್ತ ಬೆಂಗಳೂರು ವಿಶ್ವವಿದ್ಯಾಲಯವು ಬಿ.ಪಿ.ಇಡಿ, ಎಲ್‌ಎಲ್‌ಬಿ ಮತ್ತು ಸ್ನಾತಕೋತ್ತರ ಪದವಿಗಳ ಪರೀಕ್ಷೆಗಳನ್ನು ಮುಂದೂಡಿದೆ.

ಫಲಿತಾಂಶ ಸ್ಥಗಿತ?: ಪದವಿ ಕೋರ್ಸ್‌ಗಳ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನಿಗದಿತ ಪ್ರಾಧ್ಯಾಪಕರನ್ನು ಕಳುಹಿಸದ ಕಾಲೇಜುಗಳ ಫಲಿತಾಂಶವನ್ನು ತಡೆ ಹಿಡಿಯಲು ಬೆಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ.

1, 3, 5 ಮತ್ತು 7ನೇ ಸೆಮಿಸ್ಟರ್‌ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯಡಿ.31ರಿಂದ ನಡೆಯುತ್ತಿದೆ. ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ 2000 ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಆರ್ಡಿನೆನ್ಸ್‌ ಪ್ರಕಾರ ಅರ್ಹ ಮೌಲ್ಯಮಾಪಕರನ್ನು ಆಯಾ ಕಾಲೇಜುಗಳು ಕಳುಹಿಸಿಕೊಡಬೇಕು.

ADVERTISEMENT

ಪ್ರಾಧ್ಯಾಪಕರನ್ನು ಕಳುಹಿಸಿಕೊಡದಿದ್ದರೆ ಅಥವಾ ಪ್ರಾಧ್ಯಾಪಕರೇ ಗೈರು ಹಾಜರಾದರೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಮಾಹಿತಿಯನ್ನು ಕಾಲೇಜು ಶಿಕ್ಷಣ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ ಎಂದು ವಿ.ವಿ. ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.