ADVERTISEMENT

ಬೆಂಗಳೂರು | ಕೆಲಸ ಬಿಡುವ ವಿಚಾರಕ್ಕೆ ಗಲಾಟೆ: ಪತ್ನಿ ಕೊಲೆ, ಆರೋಪಿ ಸೆರೆ

ಪತಿಯ ಬಂಧನ, ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 20:58 IST
Last Updated 27 ಡಿಸೆಂಬರ್ 2025, 20:58 IST
ಆಯೇಷಾ
ಆಯೇಷಾ   

ಬೆಂಗಳೂರು: ಕೆಲಸ ಬಿಡುವ ವಿಚಾರಕ್ಕೆ ಗಲಾಟೆ ನಡೆದು, ಪತ್ನಿಯ ಕೊಲೆ ಮಾಡಿದ ಪತಿಯನ್ನು ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಅಗ್ರಹಾರ ಲೇಔಟ್‌ನ ಆಯೇಷಾ ಸಿದ್ದಿಕಿ ಕೊಲೆಯಾದವರು. 

ಕೃತ್ಯ ಎಸಗಿದ ಆರೋಪದ ಅಡಿ ಸೈಯದ್ ಜಬಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಯೇಷಾ ಅವರು ಮೂರು ತಿಂಗಳ ಹಿಂದೆ ಸೈಯದ್‌ನನ್ನು ಮದುವೆ ಆಗಿದ್ದರು.

ADVERTISEMENT

ಆಯೇಷಾ ಅವರ ಮೊದಲ ಪತಿ ಮೃತಪಟ್ಟಿದ್ದರಿಂದ ಎರಡನೇ ಮದುವೆ ಆಗಿದ್ದರು. ಎರಡನೇ ಪತಿಗೂ ವಿಚ್ಛೇದನ ನೀಡಿ ಆರೋಪಿ ಸೈಯದ್ ಜತೆಗೆ ಮದುವೆ ಆಗಿದ್ದರು. ಆಯೇಷಾ ಮಸಾಜ್ ಪಾರ್ಲರ್, ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆ ಕೆಲಸ ಬಿಡುವಂತೆ ಸೈಯದ್ ಒತ್ತಾಯಿಸಿದ್ದರು. ಕೆಲಸದ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ನಡೆದು ವಿಕೋಪಕ್ಕೆ ತಿರುಗಿ ಆಯೇಷಾ ಅವರನ್ನು ಆರೋಪಿ ಕೊಲೆ ಮಾಡಿದ್ದಾನೆ. ಕೃತ್ಯ ಎಸಗಿದ ಬಳಿಕ ಯಲಹಂಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ ಎಂದು ಮೂಲಗಳು ಹೇಳಿವೆ.

ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೈಯದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.