ADVERTISEMENT

ಕೈಕೊಟ್ಟ ಸರ್ವರ್: ಪ್ರವಾಸಿಗರ ಪರದಾಟ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 20:30 IST
Last Updated 21 ನವೆಂಬರ್ 2018, 20:30 IST

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸರ್ವರ್ ಕೈಕೊಟ್ಟಿದ್ದರಿಂದ ವೀಕ್ಷಣೆಗಾಗಿ ತೆರಳಿದ್ದ ನೂರಾರು ಮಂದಿ ಪ್ರವಾಸಿಗರು ಟಿಕೆಟ್ ದೊರೆಯದೇ ಪರದಾಡುವಂತಾಯಿತು.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆನ್‌ಲೈನ್ ಟಿಕೆಟ್ ವ್ಯವಸ್ಥೆಯಿದೆ. ಸಿನೆಟ್ ಮತ್ತು ಬಿಎಸ್ಎಲ್ಎಲ್ ನೆಟ್‌ವರ್ಕ್‌ ಅಳವಡಿಸಿಕೊಳ್ಳಲಾಗಿದೆ. ಬುಧವಾರ ಬೆಳಿಗ್ಗೆ 10ಕ್ಕೆ ನೆಟ್ ಕೈಕೊಟ್ಟಿತು. ಇದರಿಂದ ಟಿಕೆಟ್ ನೀಡಲು ಸಾಧ್ಯವಾಗಲಿಲ್ಲ.

ಈದ್‌–ಮಿಲಾದ್ ರಜೆ ಇದುದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಉದ್ಯಾನ ವೀಕ್ಷಣೆಗೆ ಬಂದಿದ್ದರು.

ADVERTISEMENT

ಬನ್ನೇರುಘಟ್ಟ ಜೈವಿಕ ಉದ್ಯಾನ ರಸ್ತೆಯ ಸಂಪಿಗೆಹಳ್ಳಿಯ ಬಳಿ ಬಿಎಸ್ಎನ್ಎಲ್ ಕೇಬಲ್ ಕಡಿತಗೊಂಡಿದ್ದರಿಂದ ನೆಟ್‌ವರ್ಕ್‌ ಸ್ಥಗಿತವಾಗಿತ್ತು. ಬಿಎಸ್ಎನ್ಎಲ್ ಜೊತೆಗೆ ಸಿನೆಟ್ ಅಂತರ್ಜಾಲ ಸಂಪರ್ವಿದ್ದರೂ ಅದು ವೇಗವಾಗಿಲ್ಲ. ಹಾಗಾಗಿ ಟಿಕೆಟ್ ನೀಡಲು ತೊಂದರೆ ಉಂಟಾಯಿತು. 12ರ ವೇಳೆಗೆ ಕೆಲಕಾಲ ಕಾರ್ಯನಿರ್ವಹಿಸಿತು. ಮತ್ತೆ ಸರ್ವರ್ ಕೈಕೊಟ್ಟಿತ್ತು. ಇದರಿಂದಾಗಿ ತೊಂದರೆ ಉಂಟಾಯಿತು. ನಾಲ್ಕರ ವೇಳೆಗೆ ಸರಿಯಾಯಿತು. ಬುಧವಾರ 4,400 ಪ್ರವಾಸಿಗರು ಉದ್ಯಾನ ವೀಕ್ಷಿಸಿದ್ದಾರೆ ಎಂದು ಉದ್ಯಾನದ ಉಪನಿರ್ದೇಶಕ ಕುಶಾಲಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.