ADVERTISEMENT

ಬೆಂಗಳೂರು: ಬನ್ನೇರುಘಟ್ಟದಲ್ಲಿ ಹುಲಿ ದಿನವೇ ಬಿಳಿ ಹುಲಿ ‘ವನ್ಯ’ ಸಾವು

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 15:39 IST
Last Updated 30 ಜುಲೈ 2022, 15:39 IST
ಬಿಳಿ ಹುಲಿ ವನ್ಯ
ಬಿಳಿ ಹುಲಿ ವನ್ಯ   

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ವನ್ಯ(6) ಎಂಬ ಹುಲಿಯು ಬಹು ಅಂಗಾಂಗಳ ವೈಪಲ್ಯದಿಂದ ಶುಕ್ರವಾರ ಮೃತಪಟ್ಟಿದೆ. ಹುಲಿ ದಿನದಂದೇ ವನ್ಯ ಮೃತಪಟ್ಟಿದೆ. ಈ ಘಟನೆಯು ಉದ್ಯಾನದ ಸಿಬ್ಬಂದಿಯನ್ನು ದುಃಖಿತರನ್ನಾಗಿಸಿದೆ.

ಬನ್ನೇರುಘಟ್ಟ ಉದ್ಯಾನದ ಬಿಳಿ ಹುಲಿ ವನ್ಯಾ ಕಳೆದ ಆರು ವರ್ಷಗಳ ಹಿಂದೆ ಜೈವಿಕ ಉದ್ಯಾನದ ಸುಭದ್ರಳಿಗೆ ಜನಿಸಿತ್ತು.

ಏಪ್ರಿಲ್‌ 22ರಿಂದ ಹುಲಿಯು ಅನಾರೋಗ್ಯದಿಂದ ಬಳಲುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜುಲೈ 29 ರಂದು ವಿಶ್ವ ಹುಲಿ ದಿನ ಇತ್ತು. ಇದೇ ದಿನ ಹುಲಿ ಮೃತಪಟ್ಟಿರುವುದು ಪ್ರಾಣಿ ಪ್ರಿಯರಿಗೆ ದುಃಖ ಆಗುವಂತೆ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.