ADVERTISEMENT

ಭಾವನೆಗಳ ಅಭಿವ್ಯಕ್ತಿಗೆ ಸಣ್ಣಕತೆ ಸೂಕ್ತ ಮಾಧ್ಯಮ: ಸಾಹಿತಿ ಬಾನು ಮುಷ್ತಾಕ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 0:20 IST
Last Updated 13 ಜುಲೈ 2025, 0:20 IST
<div class="paragraphs"><p>ಕಾರ್ಯಕ್ರಮದಲ್ಲಿ ಸಾಹಿತಿ ಬಾನು ಮುಷ್ತಾಕ್ ಅವರನ್ನು ಸನ್ಮಾನಿಸಲಾಯಿತು.g</p></div>

ಕಾರ್ಯಕ್ರಮದಲ್ಲಿ ಸಾಹಿತಿ ಬಾನು ಮುಷ್ತಾಕ್ ಅವರನ್ನು ಸನ್ಮಾನಿಸಲಾಯಿತು.g

   

ಬೆಂಗಳೂರು: ಸಣ್ಣಕತೆಗಳು ಮನುಷ್ಯನ ಭಾವನೆಗಳಿಗೆ ಸೂಕ್ತ ಅಭಿವ್ಯಕ್ತಿಯ ಮಾಧ್ಯಮವಾಗಬಲ್ಲವು ಎಂದು ಸಾಹಿತಿ ಬಾನು ಮುಷ್ತಾಕ್ ಪ್ರತಿಪಾದಿಸಿದರು.

ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸನೀಡಿದರು.

ADVERTISEMENT

‘ನನಗೆ ಉರ್ದು, ಹಿಂದಿ, ಇಂಗ್ಲಿಷ್, ಅರೇಬಿಕ್ ಮುಂತಾದ ಬಹುಭಾಷೆಯ ಜ್ಞಾನವಿದ್ದರೂ ಕನ್ನಡವೇ ನನ್ನ ಮೆಚ್ಚಿನ ಭಾಷೆ’ ಎಂದು ಹೇಳಿದರು.

‘1948ರಲ್ಲಿ ಕೆಲವು ವಿದ್ಯಾರ್ಥಿನಿಯರೊಂದಿಗೆ ಆರಂಭವಾದ ಈ ಸಂಸ್ಥೆ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯ ನೀಡುವ ಮರವಾಗಿದೆ. ಇದು ಹೆಮ್ಮೆಯ ವಿಷಯ’ ಎಂದರು.

ನಂತರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ನಡೆದ ಸಂವಾದದಲ್ಲಿ, ಎಂಟು ವರ್ಷದವರೆಗೆ ಕನ್ನಡದ ಗೊತ್ತಿಲ್ಲದಿದ್ದರೂ, ಕೆಲವೇ ತಿಂಗಳಲ್ಲಿ ಕನ್ನಡವನ್ನು ಸಮರ್ಥವಾಗಿ ಕಲಿತು ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪಡೆಯುವವರೆಗಿನ ಅನುಭವ ಮತ್ತು ಎದುರಿಸಿದ ಸವಾಲುಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕರಾದ ಸಿಸ್ಟರ್ ಅಲ್ಬಿನ, ಪ್ರಾಚಾರ್ಯರಾದ ಲೇಖಾ ಜಾರ್ಜ್, ಸಿಸ್ಟರ್ ಆನೆಟ್, ಸಿಸ್ಟರ್ ಅಯೋನ, ಸುಮಾ ಸಿಂಗ್, ನಿವೃತ್ತ ಪ್ರಾಧ್ಯಾಪಕರು, ಪ್ರಾಧ್ಯಾಪಕರು ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.