ADVERTISEMENT

ನೇತಾರರ ಬಾಯಲ್ಲಿ ಹಿಂಸಾತ್ಮಕ ಪದಗಳು: ಬರಗೂರು ಕಳವಳ

ಎಚ್.ಎಲ್.ಪುಷ್ಪ ಅವರ ಕೃತಿಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 19:42 IST
Last Updated 24 ಫೆಬ್ರುವರಿ 2020, 19:42 IST
ಎಚ್.ಎಲ್.ಪುಷ್ಪ ಅವರ ಮೂರು ಪುಸ್ತಕಗಳನ್ನು ಬರಗೂರು ರಾಮಚಂದ್ರಪ್ಪ ಬಿಡುಗಡೆ ಮಾಡಿದರು. ಪ್ರದೀಪ್ ಮಾಲ್ಗುಡಿ, ವಿಮರ್ಶಕಿ ಎಂ.ಎಸ್.ಆಶಾದೇವಿ, ಡಾ.ಪ್ರತಿಭಾ ನಂದಕುಮಾರ್, ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಎನ್‌.ಕವನ ಇದ್ದರು.
ಎಚ್.ಎಲ್.ಪುಷ್ಪ ಅವರ ಮೂರು ಪುಸ್ತಕಗಳನ್ನು ಬರಗೂರು ರಾಮಚಂದ್ರಪ್ಪ ಬಿಡುಗಡೆ ಮಾಡಿದರು. ಪ್ರದೀಪ್ ಮಾಲ್ಗುಡಿ, ವಿಮರ್ಶಕಿ ಎಂ.ಎಸ್.ಆಶಾದೇವಿ, ಡಾ.ಪ್ರತಿಭಾ ನಂದಕುಮಾರ್, ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಎನ್‌.ಕವನ ಇದ್ದರು.   

ಬೆಂಗಳೂರು: ‘ಈ ಹಿಂದೆ ನೇತಾರರು ಹೇಳುವ ಘೋಷಣೆಗಳು ಜನಪರವಾಗಿದ್ದವು. ಆದರೆ, ಈಗಿನ ನಾಯಕರು ಬಾಯಿಗೆ ಬಂದಂತೆ ಹಿಂಸಾತ್ಮಕ ಮತ್ತು ಭಯ ಸೃಷ್ಟಿಸುವ ಮಾತುಗಳನ್ನಾಡುತ್ತಿದ್ದಾರೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.

ಸಂಸ ಥಿಯೇಟರ್‌ ಹಾಗೂ ಕಿರಂ ಪ್ರಕಾಶನ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿದ್ದ ಎಚ್.ಎಲ್.ಪುಷ್ಪ ಅವರ ‘ಮದರಂಗಿ ವೃತ್ತಾಂತ’, ‘ಸೋಲಾಬರಸ್‌ ಹುಡುಗರು ಹಾಗೂ ಎಕ್ಕದ ಬೀಜ’ ಹಾಗೂ ‘ಅಮೃತಮತಿ ಸ್ವಗತ’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ನಾಗರ ನಾಲಿಗೆಗಳ ನೇತಾರರು ಹೆಚ್ಚಾಗುತ್ತಿದ್ದು, ಅವರು ಜನವಿರೋಧಿ ಹಾಗೂ ಸಮಾಜವಿರೋಧಿಗಲೂ ಆಗಿದ್ದಾರೆ. ‘ಹೊಡಿ.. ಬಡಿ.. ಎನ್‍ಕೌಂಟರ್...’ ಎಂಬ ಪದಗಳಿಂದ ಜನರಲ್ಲಿ ಭಯ ಹುಟ್ಟಿಸುತ್ತಾರೆ. ಈ ಪ್ರವೃತ್ತಿ ಬದಲಾಗಬೇಕು’ ಎಂದರು.

ADVERTISEMENT

‘ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ಜಗದ್ಗುರು ಪರಂಪರೆ ಆಗದೆ ಜನ ಪರಂಪರೆಯಾಗಬೇಕು.
ಸಾಹಿತ್ಯದಲ್ಲಿ ಸೃಜನಶೀಲತೆ ಗಟ್ಟಿಯಾಗಿ ಉಳಿಯಬೇಕಾದರೆ ಪರಂಪರೆ ಅನುಸರಿಸಬೇಕು. ಸಾಹಿತ್ಯವು ಬಹಿರಂಗದ ಬಾಯಾಗದೆ ಅಂತರಂಗದ ಕಣ್ಣಾಗಬೇಕು. ಇದು ಆರೋಗ್ಯಕರ ಸಮಾಜ ನಿರ್ಮಿಸುತ್ತದೆ’ ಎಂದರು.

ವಿಮರ್ಶಕಿಎಂ.ಎಸ್.ಆಶಾದೇವಿ, ‘ಹೆಣ್ಣಿನ ಏಳುಬೀಳು ಭಾವನೆಗಳನ್ನು ಬಿಂಬಿಸುವ ಅಂತಃಕರಣದ ವಿಷಯಗಳುಲೇಖಕಿ ಪುಷ್ಪ‍ ಅವರ ಕಾವ್ಯಗಳಲ್ಲಿ ಅಡಕವಾಗಿವೆ. ಕಾವ್ಯದಲ್ಲಿರುವ ಹೆಣ್ಣಿನ ಭಾಷೆ ಅರ್ಥಮಾಡಿಕೊಳ್ಳದಿದ್ದರೆ ಕಾವ್ಯಕ್ಕೆ ಅಗೌರವ ತೋರಿದಂತೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.