ADVERTISEMENT

ಜನತಾ ಜೀವ ವೈವಿಧ್ಯ ದಾಖಲಾತಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 10:38 IST
Last Updated 20 ಜೂನ್ 2020, 10:38 IST
ಸಭೆಯಲ್ಲಿ ಅನಂತ ಹೆಗಡೆ ಆಶೀಸರ(ಮಧ್ಯದಲ್ಲಿ ಇರುವವರು) ಮಾತನಾಡಿದರು. ಪಾಲಿಕೆ ವಿಶೇಷ ಆಯುಕ್ತ(ಅರಣ್ಯ) ಜೆ.ಮಂಜುನಾಥ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿರೇಂದರ್ ಸಿಂಗ್ ಇದ್ದರು
ಸಭೆಯಲ್ಲಿ ಅನಂತ ಹೆಗಡೆ ಆಶೀಸರ(ಮಧ್ಯದಲ್ಲಿ ಇರುವವರು) ಮಾತನಾಡಿದರು. ಪಾಲಿಕೆ ವಿಶೇಷ ಆಯುಕ್ತ(ಅರಣ್ಯ) ಜೆ.ಮಂಜುನಾಥ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿರೇಂದರ್ ಸಿಂಗ್ ಇದ್ದರು   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಜನತಾ ಜೀವ ವೈವಿಧ್ಯ ದಾಖಲಾತಿ ಆರಂಭಿಸುವ ಕುರಿತು ಪಾಲಿಕೆ ಅಧಿಕಾರಿಗಳೊಂದಿಗೆ ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಶುಕ್ರವಾರ ಸಭೆ ನಡೆಸಿದರು.

ಈ ದಾಖಲಾತಿಯನ್ನು ಯಾವ ರೀತಿ ಮಾಡಬೇಕು, ಎಷ್ಟು ಸಿಬ್ಬಂದಿಯ ಅವಶ್ಯಕತೆ ಇದೆ, ಸ್ವಯಂಸೇವಾ ಸಂಸ್ಥೆಗಳ ಸಹಕಾರವನ್ನು ಹೇಗೆ ಪಡೆಯಬೇಕು ಎಂಬುದರ ಕುರಿತು ಆಶೀಸರ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ನಗರದಲ್ಲಿ ಹಸಿರುಹೆಚ್ಚಿಸಲು ಪ್ರಾಮುಖ್ಯತೆ ನೀಡಬೇಕು. ಪಾಲಿಕೆ ನರ್ಸರಿಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ನೆಡಲು ಮುಂದಾಗಬೇಕು’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.