ADVERTISEMENT

ಬೆಂಗಳೂರು: ಉದ್ಯಾನಗಳಲ್ಲಿ 634 ಇಂಗು ಗುಂಡಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 23:00 IST
Last Updated 9 ಅಕ್ಟೋಬರ್ 2024, 23:00 IST
ಬಿಬಿಎಂಪಿಯ ಉದ್ಯಾನದಲ್ಲಿ ನಿರ್ಮಿಸಲಾಗಿರುವ ಇಂಗು ಗುಂಡಿ
ಬಿಬಿಎಂಪಿಯ ಉದ್ಯಾನದಲ್ಲಿ ನಿರ್ಮಿಸಲಾಗಿರುವ ಇಂಗು ಗುಂಡಿ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ವಿವಿಧ ಉದ್ಯಾನಗಳಲ್ಲಿ ಒಟ್ಟು 634 ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಅರಣ್ಯ, ಪರಿಸರ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್‌ ತಿಳಿಸಿದ್ದಾರೆ.

ಮಳೆ ನೀರು ಸಂಗ್ರಹಿಸಿ, ಇಂಗಿಸುವ ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು 2025ರ ಮಾರ್ಚ್‌ ಅಂತ್ಯಕ್ಕೆ ಒಟ್ಟು ಒಂದು ಸಾವಿರ ಇಂಗು ಗುಂಡಿಗಳನ್ನು ನಿರ್ಮಿಸುವ ಗುರಿ ಇದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಪಾಲಿಕೆಯ ವ್ಯಾಪ್ತಿಯಲ್ಲಿ 1,280 ಉದ್ಯಾನಗಳಿವೆ. ಸ್ಥಳಾವಕಾಶ ಆಧರಿಸಿ ಹಂತ ಹಂತವಾಗಿ ಇಂಗು ಗುಂಡಿಗಳನ್ನು ತೋಟಗಾರಿಕೆ ವಿಭಾಗದಿಂದ ನಿರ್ಮಿಸಲಾಗುತ್ತೆ. 12 ಅಡಿ ಆಳ ಹಾಗೂ 5 ಅಡಿ ಅಗಲ ಅಳತೆಯ ಇಂಗು ಗುಂಡಿಗಳನ್ನು ನಿರ್ಮಿಸಲಿದ್ದು, ನಾಲ್ಕು ಸಾವಿರ ಲೀಟರ್‌ ಮಳೆ ನೀರನ್ನು ಸಂಗ್ರಹವಾಗುವಂತೆ ಮಾಡಲಾಗಿದೆ ಎಂದಿದ್ದಾರೆ.

ADVERTISEMENT

ವೈಜ್ಞಾನಿಕವಾಗಿ ಇಂಗು ಗುಂಡಿಗಳನ್ನು ನಿರ್ಮಿಸಲಾಗುತ್ತಿದೆ. ನೀರು ಹರಿದು ಹೋಗುವ ಗುಂಡಿಯ ದ್ವಾರಕ್ಕೆ ಕಬ್ಬಿಣದ ಪರದೆ ಅಳವಡಿಸಲಾಗಿದೆ. ಈ ಮೂಲಕ ನೀರಿನಲ್ಲಿ ಕಸ-ಕಡ್ಡಿ ಗುಂಡಿಗೆ ಸೇರುವುದನ್ನು ತಡೆದು ಶೇ 80 ರಷ್ಟು ಪ್ರಮಾಣದ ನೀರು ಇಂಗುಗುಂಡಿಗೆ ಸೇರುವಂತೆ ಮಾಡಲಾಗಿದೆ. ನಾಲ್ಕು ಅಡಿ ಸುತ್ತಳತೆಯ ಸಿಮೆಂಟ್ ರಿಂಗ್ ಅಳವಡಿಸಿದ್ದು, ಸುತ್ತಲೂ ಆಳದಿಂದ ಭೂಮಿಯ ಮೇಲ್ಮೈವರೆಗೆ 40 ಎಂಎಂ ಜಲ್ಲಿಕಲ್ಲು ತುಂಬಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.