ADVERTISEMENT

 ಸೋಂಕು ನಿವಾರಕ ಸಿಂಪಡಣೆಗೆ ಬಿಬಿಎಂಪಿ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 8:26 IST
Last Updated 24 ಮಾರ್ಚ್ 2020, 8:26 IST
   

ಬೆಂಗಳೂರು: ಕೊರೊನಾ ವೈರಸ್ ಎಲ್ಲಡೆ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಗರದ ಪ್ರಮುಖ ಸ್ಥಳಗಳಲ್ಲಿ ಸೋಂಕು ನಿವಾರಕ (ಸೋಡಿಯಂ ಹೆೃಪೊ ಕ್ಲೋರೈಡಂ) ಸಿಂಪಡಣೆ ಮಾಡಲಿದೆ.

ಈ ಕಾರ್ಯಕ್ಕೆ ಮೇಯರ್ ಎಂ.ಗೌತಮ್ ಕುಮಾರ್ ಪಾಲಿಕೆ ಕೇಂದ್ರ ಕಚೇರಿ ಬಳಿ ಮಂಗಳವಾರ ಚಾಲನೆ ನೀಡಿದರು.

ಕರೋನಾ ಸೋಂಕಿತರ ಮನೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೆಟ್ಟಿಂಗ್ ಮೆಷೀನ್ ಯಂತ್ರಗಳ ಮೂಲಕ ಹಾಗೂ ಡ್ರೋನ್ ಯಂತ್ರಗಳ ಸಹಾಯದಿಂದ ಈ ದ್ರಾವಣವನ್ನು ಸಿಂಪಡಿಸಲಾಗುತ್ತದೆ.

ADVERTISEMENT

ಆಯುಕ್ತರಾದ ಅನಿಲ್ ಕುಮಾರ್, ವಿಶೇಷ ಆಯುಕ್ತ (ಕಸ ವಿಲೇವಾರಿ) ರಂದೀಪ್, ಮತ್ತು ಜಂಟಿ ಆಯುಕ್ತ (ಕಸ ವಿಲೇವಾರಿ) ಸರ್ಫರಾಜ಼್ ಖಾನ್ ಕಾರ್ಯಾಚರಣೆ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.