ADVERTISEMENT

‘ದಿಟ್ಟ ಮಹಿಳಾ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 22:16 IST
Last Updated 7 ಮಾರ್ಚ್ 2020, 22:16 IST
ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ಗಾಯಕಿ ರಮ್ಯಾ ವಸಿಷ್ಠ, ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು, ನಿರೂಪಕಿ ನಿಶಾ ಶೆಟ್ಟಿ, ಪೊಲೀಸ್ ಅಧಿಕಾರಿ ಅಂಜುಮಾಲಾ ನಾಯಕ್ ಹಾಗೂ ಹೈಕೋರ್ಟ್‌ ವಕೀಲೆ ಶೋಭಾ ಯದುರಾಜ್ ಅವರಿಗೆ ‘ದಿಟ್ಟ ಮಹಿಳಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮೇಯರ್ ಎಂ.ಗೌತಮ್ ಕುಮಾರ್, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಪಾಲಿಕೆ ವಿರೋಧ ಪಕ್ಷದ ನಾಯಕಿ ನೇತ್ರಾ ನಾರಾಯಣ್ ಹಾಗೂ ಇತರರು ಇದ್ದರು     ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕಾನೂನುಗಳ ಬಳಕೆಗಿಂತ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು’ ಎಂದು ಸಿಸಿಬಿ ಇಸ್‌ಸ್ಪೆಕ್ಟರ್‌ ಅಂಜುಮಾಲಾ ನಾಯಕ್ ತಿಳಿಸಿದರು.

ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನದ ಅಂಗವಾಗಿ ಸಾಧಕಿಯರಿಗೆ ‘ದಿಟ್ಟ ಮಹಿಳಾ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯ ನಟಿ ಭಾರತಿ ವಿಷ್ಣುವರ್ಧನ್,‘ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋಗುವಾಗ ಧರಿಸಿರುವ ಉಡುಪುಗಳ ಬಗ್ಗೆಪೋಷಕರು ನಿಗಾ ವಹಿಸಬೇಕು. ಅಪಾಯಕ್ಕೂ ಮುನ್ನ ಪೋಷಕರೇ ಎಚ್ಚರ ವಹಿಸಬೇಕು. ಎಲ್ಲೆಡೆ ಮೊಬೈಲ್ ಬಳಸುವುದರ ಬದಲಿಗೆ ಒಂದೆಡೆ ಕೂತು ಬಳಕೆ ಮಾಡುವಂತೆ ಸಲಹೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಪಾಲಿಕೆ ಗಾಜಿನ ಮನೆ ಆವರಣದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.