ADVERTISEMENT

ಬಿಬಿಎಂಪಿ ಬಜೆಟ್‌: ಸಲಹೆ ನೀಡಲು ಜ.10 ಕೊನೆಯ ದಿನ

'ನನ್ನ ನಗರ ನನ್ನ ಬಜೆಟ್’ಗೆ 5ಸಾವಿರಕ್ಕೂ ಹೆಚ್ಚು ಜನರಿಂದ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 14:13 IST
Last Updated 9 ಜನವರಿ 2021, 14:13 IST
‘ನನ್ನ ನಗರ ನನ್ನ ಬಜೆಟ್‌’ ಅಭಿಯಾನದ ವಾಹನವು ಲಾಲ್‌ಭಾಗ್‌ಗೆ ಹೋಗಿದ್ದ ವೇಳೆ ಹಿರಿಯ ನಾಗರಿಕರೊಬ್ಬರು ಸಲಹೆಯನ್ನು ಪೆಟ್ಟಿಗೆಗೆ ಹಾಕಿದರು.
‘ನನ್ನ ನಗರ ನನ್ನ ಬಜೆಟ್‌’ ಅಭಿಯಾನದ ವಾಹನವು ಲಾಲ್‌ಭಾಗ್‌ಗೆ ಹೋಗಿದ್ದ ವೇಳೆ ಹಿರಿಯ ನಾಗರಿಕರೊಬ್ಬರು ಸಲಹೆಯನ್ನು ಪೆಟ್ಟಿಗೆಗೆ ಹಾಕಿದರು.   

ಬೆಂಗಳೂರು: ಬಿಬಿಎಂಪಿಯ 2021–22ನೇ ಸಾಲಿನ ಬಜೆಟ್‌ಗೆ ಜನರಿಂದ ಸಲಹೆ ಪಡೆಯಲು ಹಮ್ಮಿಕೊಂಡಿದ್ದ ‘ನನ್ನ ನಗರ ನನ್ನ ಬಜೆಟ್‌’ ಅಭಿಯಾನದ ಮೂಲಕ ಇದುವರೆಗೆ 5ಸಾವಿರಕ್ಕೂ ಅಧಿಕ ಮಂದಿ ಸಲಹೆಗಳನ್ನು ನೀಡಿದ್ದಾರೆ. ಜನಾಗ್ರಹ ಸಂಸ್ಥೆಯು ಪಾಲಿಕೆ ಸಹಭಾಗಿತ್ವದಲ್ಲಿ ಏರ್ಪಡಿಸಿರುವ ಈ ಅಭಿಯಾನದ ಮೂಲಕ ಬಜೆಟ್‌ಗೆ ಸಲಹೆ ನೀಡಲು ಇದೇ 10 (ಭಾನುವಾರ) ಕೊನೆಯ ದಿನ.

‘ನನ್ನ ನಗರ ನನ್ನ ಬಜೆಟ್ ಅಭಿಯಾನಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಾಗರಿಕರು www.yellowspots.in ಪೋರ್ಟಲ್‌ನಲ್ಲಿ, ವಾಟ್ಸ್‌ ಆ್ಯಪ್ ಮೂಲಕ ಹಾಗೂ ಬಜೆಟ್ ವಾಹನದ ಮೂಲಕ ಹಾಗೂ ನಿವಾಸಿಗಳ ಕ್ಷೇಮಾಭೀವೃದ್ಧಿ ಸಂಘಗಳ (ಆರ್‌ಡಬ್ಲ್ಯುಎ) ಮೂಲಕ ಸಲಹೆಗಳನ್ನು ಸಲ್ಲಿಸಿದ್ದಾರೆ. ಈ ಅಭಿಯಾನ ನಗರದ ಮಕ್ಕಳು, ಪೌರಕಾರ್ಮಿಕರು ಮತ್ತು ನಗರ ಬಡಜನರೇ ಹೆಚ್ಚು ಇರುವ ಪ್ರದೇಶಗಳನ್ನೂ ತಲುಪಿದೆ’ ಎಂದು ಜನಾಗ್ರಹ ಸಂಸ್ಥೆ ತಿಳಿಸಿದೆ.

‘ಜನರು ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುವ ತಾಣಗಳ (ಹಳದಿ ತಾಣಗಳು) ನಿರ್ಮೂಲನೆ, ಹೊಸ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮತ್ತು ಪಾದಚಾರಿ ಮಾರ್ಗದ ಅವಶ್ಯಕತೆಗಳ ಕುರಿತು ನಗರದ ನಿವಾಸಿಗಳಿಂದ ಸಲಹೆಗಳನ್ನು ಸಂಗ್ರಹಿಸಲು ಬಜೆಟ್ ಬಸ್ ಮತ್ತು ಏಳು ಆಟೊರಿಕ್ಷಾಗಳನ್ನು ಆರ್‌ಡಬ್ಲ್ಯುಎಗಳ ಮತ್ತು ಸಮುದಾಯ ಗುಂಪುಗಳ ನೆರವಿನಿಂದ ನಗರದ ಸೇರಿದಂತೆ ನಗರದ ಮೂಲೆ ಮೂಲೆಗಳಿಗೂ ಕರೆದೊಯ್ಯಲಾಗಿದೆ’ ಎಂದೂ ಸಂಸ್ಥೆ ಹೇಳಿದೆ.

ADVERTISEMENT

‘ನಾಗರಿಕರು ಬಿಬಿಎಂಪಿ ಬಜೆಟ್‍ಗೆ ಸಲಹೆ ನೀಡಲು ಕಡೇಯ ಒಂದು ದಿನದ ಅವಕಾಶ ಉಳಿದಿದೆ. ಇದನ್ನು ಜನ ಬಳಸಿಕೊಳ್ಳುಬೇಕು’ ಎಂದು ಸಂಸ್ಥೆ ಮನವಿ ಮಾಡುತ್ತೇವೆ.

ಬಿಬಿಎಂಪಿ ಬಜೆಟ್‌ಗೆ ಸಲಹೆ ಸಲ್ಲಿಕೆಗೆ

* www.yellowspots.in

* ವಾಟ್ಸಾಪ್ ಮಾಡಿ- 70233 85666

ಬಜೆಟ್‌ ಬಸ್‌ನ ಮಾರ್ಗ ತಿಳಿಯಲು

ಟ್ವಿಟರ್‌: @ichangemycity

ಫೇಸ್‌ಬುಕ್‌: www.facebook.com/ichangemycity

ಮಾಹಿತಿಗೆ: 99860 16557

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.