ADVERTISEMENT

BDA Flat Expo | ಕೊಮ್ಮಘಟ್ಟ: 75 ಫ್ಲ್ಯಾಟ್ ಮಾರಾಟ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 15:19 IST
Last Updated 19 ಜುಲೈ 2025, 15:19 IST
ಕೊಮ್ಮಘಟ್ಟದಲ್ಲಿ ಆಯೋಜಿಸಿದ್ದ ಬಿಡಿಎ ಫ್ಲ್ಯಾಟ್‌ ಮೇಳದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು. 
ಕೊಮ್ಮಘಟ್ಟದಲ್ಲಿ ಆಯೋಜಿಸಿದ್ದ ಬಿಡಿಎ ಫ್ಲ್ಯಾಟ್‌ ಮೇಳದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು.    

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶನಿವಾರ ಕೊಮ್ಮಘಟ್ಟ ವಸತಿ ಸಮುಚ್ಛಯದಲ್ಲಿ ಆಯೋಜಿಸಿದ್ದ ಫ್ಲ್ಯಾಟ್‌ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ.

100 ಫ್ಲ್ಯಾಟ್‌ಗಳನ್ನು ಕಾಯ್ದಿರಿಸಿ, 75 ಸಾರ್ವಜನಿಕರು ಫ್ಲ್ಯಾಟ್‌ನ ಪ್ರಾರಂಭಿಕ ಠೇವಣಿ ಮೊತ್ತವನ್ನು ಪಾವತಿಸಿದರು. ಇದೇ ವೇಳೆ ಅಧಿಕಾರಿಗಳು ಗ್ರಾಹಕರಿಗೆ ಹಂಚಿಕೆ ಪತ್ರ ವಿತರಿಸಿದರು. ಮೇಳದಲ್ಲಿ ಸುಮಾರು 500ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು. 

ಕೊಮ್ಮಘಟ್ಟದಲ್ಲಿ ಮೇಳ ಆಯೋಜಿಸಿದ್ದರೂ ಕಣಿಮಿಣಿಕೆ ವಸತಿ ಸಮುಚ್ಛಯಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ.

ADVERTISEMENT

ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್.ಡಿ.ಎಫ್.ಸಿ. ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಸೌತ್ ಇಂಡಿಯನ್ ಬ್ಯಾಂಕ್‌ಗಳ ಪ್ರತಿನಿಧಿಗಳು ಹಾಜರಿದ್ದರು.

ಪ್ರಾಧಿಕಾರವು ಫ್ಲ್ಯಾಟ್‌ಗಳ ಖರೀದಿಗೆ ಈ ಮೊದಲು ಶೇಕಡ 25ರಷ್ಟು ಆರಂಭಿಕ ಠೇವಣಿ ನಿಗದಿಪಡಿಸಿತ್ತು. ಸದ್ಯ ಬಿಡಿಎ ಆ ಮೊತ್ತವನ್ನು ಶೇ 12.5ಕ್ಕೆ ಇಳಿಕೆ ಮಾಡಿದೆ. ಇದರಿಂದ ಹೆಚ್ಚಿನ ಮಂದಿ ಫ್ಲ್ಯಾಟ್‌ಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.

ಪ್ರಾಧಿಕಾರದ ಆರ್ಥಿಕ ಸದಸ್ಯ ಎ. ಲೋಕೇಶ, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸಮೂರ್ತಿ, ಉಪ ಕಾರ್ಯದರ್ಶಿ ಜ್ಞಾನೇಶ್, ಎಂಜಿನಿಯರ್‌ ಮಲ್ಲಿಕಾರ್ಜುನಸ್ವಾಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಇಂಬವಳ್ಳಿ, ಭುವನೇಶ್ವರ್ ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.