ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮೈಸೂರು ರಸ್ತೆಯಲ್ಲಿರುವ ಕಣಿಮಿಣಿಕೆ ಬಡಾವಣೆಯಲ್ಲಿ ಡಿಸೆಂಬರ್ 14ರಂದು ಫ್ಲ್ಯಾಟ್‌ಗಳ ಮೇಳ ಆಯೋಜಿಸಿದೆ.
ಕಣಿಮಿಣಿಕೆ ಮತ್ತು ತಿಪ್ಪಸಂದ್ರ ವಸತಿ ಯೋಜನೆಗಳಲ್ಲಿ ಲಭ್ಯವಿರುವ 2 ಮತ್ತು 3 ಬಿಎಚ್‌ಕೆ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಲು ಮೇಳವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 9 ರಿಂದ 5ರವರೆಗೆ ಮೇಳ ನಡೆಯಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಕಣಿಮಿಣಿಕೆ ವಸತಿ ಯೋಜನೆಯು 1, 2, 3, 4 ಮತ್ತು 5ನೇ ಹಂತವನ್ನು ಒಳಗೊಂಡಿದೆ. ಫ್ಲ್ಯಾಟ್ ಖರೀದಿಸಲು ಬಯಸುವವರು ಠೇವಣಿ ಮೊತ್ತವನ್ನು ಡಿಡಿ ಅಥವಾ ಆನ್‌ಲೈನ್ ಮೂಲಕ ಪಾವತಿಸಿ ತಾತ್ಕಾಲಿಕವಾದ ಹಂಚಿಕೆ ಪತ್ರವನ್ನು ಪಡೆಯಬಹುದು. ಸ್ಥಳದಲ್ಲೇ ನಾನಾ ಬ್ಯಾಂಕ್‌ಗಳು ಸಾಲ ಸೌಲಭ್ಯ ನೀಡಲಿವೆ. ಗ್ರಾಹಕರು ಖಾಲಿಯಿರುವ ಫ್ಲ್ಯಾಟ್‌ಗಳನ್ನು ಖರೀದಿಸಬಹುದಾಗಿದೆ.
ಫ್ಲ್ಯಾಟ್‌ನ ಮಾರಾಟ ಮೊತ್ತದ ಮೇಲೆ ಮುಂಗಡವಾಗಿ ಶೇಕಡ 1 ರಷ್ಟು ನಿರ್ವಹಣಾ ಶುಲ್ಕ ಪಡೆಯಲಾಗುತ್ತದೆ. ಬೆಂಗಳೂರು–ಮೈಸೂರು ಹೆದ್ದಾರಿಯಿಂದ 1 ಕಿ.ಮೀ. ಮತ್ತು ಚಲ್ಲಘಟ್ಟ ‘ನಮ್ಮ ಮೆಟ್ರೊ’ ನಿಲ್ದಾಣದಿಂದ 3 ಕಿ.ಮೀ.ಗೆ ದೂರವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.