ADVERTISEMENT

ಭಿಕ್ಷಾಟನೆ: 15 ತಾಯಂದಿರು, 28 ಮಕ್ಕಳಿಗೆ ಪುನರ್ವಸತಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 12:50 IST
Last Updated 15 ಜುಲೈ 2022, 12:50 IST
   

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ, ಸಿಸಿಬಿ ಪೊಲೀಸರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿನಗರದ ಪ್ರಮುಖ ವೃತ್ತಗಳಲ್ಲಿ ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆ ನಡೆಸುತ್ತಿದ್ದ ತಾಯಂದಿರು ಹಾಗೂ ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಲಾಗಿದೆ.

ಮಹಿಳೆಯರು ಪುಟ್ಟ ಮಕ್ಕಳೊಂದಿಗೆ ಭಿಕ್ಷಾಟನೆಯಲ್ಲಿ ತೊಡಗಿದ್ದು, ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಕಾರ್ಯಾಚರಣೆ ನಡೆಸಿ ಅವರಿಗೆ ಪುನರ್ವಸತಿ ಕಲ್ಪಿಸುವಂತೆ ಕೋರಿಕೆ ಬಂದಿತ್ತು. ನಗರದ 8 ವಲಯಗಳ 39 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ತಾಯಂದಿರು ಹಾಗೂ ಮಕ್ಕಳನ್ನು ರಕ್ಷಿಸಲಾಗಿದೆ.

ಉತ್ತರ ವಲಯದ ಮೇಖ್ರಿ ವೃತ್ತ, ಹೆಬ್ಬಾಳ ಪ್ಲೈಓವರ್‌, ಗೊರಗುಂಟೆ ಪಾಳ್ಯ ಸಿಗ್ನಲ್‌, ಜಾಲಹಳ್ಳಿ ಕ್ರಾಸ್, ದಕ್ಷಿಣ ವಲಯದ ಜೆ.ಪಿ ನಗರ ಸಿಗ್ನಲ್‌, ಸೌಂತ್‌ ಎಂಡ್‌ ಸರ್ಕಲ್‌, ಜೈನ್‌ ಕಾಲೇಜು, ವಿ.ವಿ ಪುರಂ, ಬನಶಂಕರಿ ಬಸ್‌ ನಿಲ್ದಾಣ, ಸಾರಕ್ಕಿ ಸಿಗ್ನಲ್‌, ಪೂರ್ವ ವಲಯದ ಶಿವಾಜಿ ನಗರ, ನಾಗವಾರ ಸಿಗ್ನಲ್‌, ಬಾಣಸವಾಡಿ ಓಂ ಶಕ್ತಿ ದೇವಸ್ಥಾನ, 80 ಅಡಿ ರಸ್ತೆ, ರಾಮಮೂರ್ತಿ ನಗರದ ಬ್ರಿಡ್ಜ್‌, ಪಶ್ಚಿಮ ವಲಯದ ಮೆಜೆಸ್ಟಿಕ್‌, ಮೈಸೂರು ಬ್ಯಾಂಕ್‌ ವೃತ್ತ, ಸಿಟಿ ರೈಲು ನಿಲ್ದಾಣ, ಅಣ್ಣಮ್ಮ ದೇವಸ್ಥಾನ, ಸುಮ್ಮನಹಳ್ಳಿ ಬ್ರಿಡ್ಜ್‌, ಶಾಂತಲಾ ವೃತ್ತ, ಕೆಂಗೇರಿ ರೈಲು ನಿಲ್ದಾಣ, ಟೋಲ್‌ಗೇಟ್‌, ಶನಿ ಮಹಾತ್ಮ ದೇವಸ್ಥಾನ, ಕೆಂಗೇರಿ ಪೊಲೀಸ್‌ ಠಾಣೆ ಎದುರು ಕಾರ್ಯಾಚರಣೆ ನಡೆಸಿ, ಭಿಕ್ಷಾಟನೆಯಲ್ಲಿದ್ದ ಮಕ್ಕಳನ್ನು ರಕ್ಷಿಸಲಾಗಿದೆ.

ADVERTISEMENT

ಆಗ್ನೇಯ ವಲಯದ ಕೋರಮಂಗಲದ ವಾಟರ್‌ ಟ್ಯಾಂಕ್‌ನ ಸೇಂಟ್‌ ಜಾನ್‌ ಆಸ್ಪತ್ರೆ, ಸಿಲ್ಕ್ ಬೋರ್ಡ್‌, ಆಡಗೋಡಿ ಸಿಗ್ನಲ್‌, ಫೋರಂ ಮಾಲ್‌, ಸೋನಿ ವರ್ಡ್‌ ಸಿಗ್ನಲ್‌, ಉಡುಪಿ ಗಾರ್ಡನ್‌ ಹೋಟೆಲ್‌, ಅರಕೆರೆ ಸಿಗ್ನಲ್‌ ಎಲೆಕ್ಟ್ರಾನಿಕ್‌ ಸಿಟಿ ಟೋಲ್‌, ಹೊಸ ರೋಡ್ ಸಿಗ್ನಲ್‌, ಅತ್ತಿಬೆಲೆ ಟೋಲ್‌, ರೆಹಾಜಾ (ಜ್ಯೋತಿ ನಿವಾಸ್‌ ಕಾಲೇಜು), ಈಶಾನ್ಯ ವಲಯದ ಕೋಡಿಗೆಹಳ್ಳಿ, ಸಿಗ್ನಲ್‌, ಯಲಹಂಕ ಕೋಗಿಲು ಕ್ರಾಸ್‌, ವೈಟ್‌ಫೀಲ್ಡ್‌ ವಲಯ ಮಾರತ್ತಹಳ್ಳಿ ಸಿಗ್ನಲ್‌ ಕೇಂದ್ರ ವಲಯದ ಚಿನ್ನಸ್ವಾಮಿ ಕ್ರೀಡಾಂಗಣದ ಸಿಗ್ನಲ್‌, ಕ್ವಿನ್ಸ್ ವೃತ್ತ, ಎಂ.ಜಿ ರಸ್ತೆಯ ಸಿಗ್ನಲ್‌ಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ಒಟ್ಟು 43 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. 15 ಮಂದಿ ತಾಯಂದಿರು, 28 ಮಕ್ಕಳನ್ನು ರಕ್ಷಣೆ ಮಾಡಲಾಯಿತು. ಅದರಲ್ಲಿ 14 ಬಾಲಕರು, 14 ಬಾಲಕಿಯರು ಸೇರಿದ್ದಾರೆ. ವಿಚಾರಣೆಯ ನಂತರ ಅಂಬಿಕಾ ಮಹಿಳಾ ಸಂಘ, ಶ್ರೀಶಿವಕುಮಾರ ಸ್ವಾಮಿ ಅವರ ಐಕ್ಯತಾ ಟ್ರಸ್ಟ್‌, ಭಾರತೀಯ ಅಧಿಮಾಜಾತಿ ಸೇವಕ ಸಂಘ, ಸಮರ್ಥನಾ ಟ್ರಸ್ಟ್‌ ಫಾರ್‌ ಡಿಸೆಬಲ್ಸ್ ಸಂಸ್ಥೆಗಳಿಗೆ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.