ADVERTISEMENT

ಮನೆ ಮನೆ ಸಮೀಕ್ಷೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 20:36 IST
Last Updated 12 ಜುಲೈ 2020, 20:36 IST
ಹೂವಿನ ವ್ಯಾಪಾರಿಯೊಬ್ಬರ ಆರೋಗ್ಯ ಪರೀಕ್ಷೆಯನ್ನು ಸಚಿವ ಡಾ. ಕೆ.ಸುಧಾಕರ್ ನಡೆಸಿದರು. ಶಾಸಕ ಎಸ್.ಆರ್.ವಿಶ್ವನಾಥ್ ಇದ್ದರು
ಹೂವಿನ ವ್ಯಾಪಾರಿಯೊಬ್ಬರ ಆರೋಗ್ಯ ಪರೀಕ್ಷೆಯನ್ನು ಸಚಿವ ಡಾ. ಕೆ.ಸುಧಾಕರ್ ನಡೆಸಿದರು. ಶಾಸಕ ಎಸ್.ಆರ್.ವಿಶ್ವನಾಥ್ ಇದ್ದರು   

ಬೆಂಗಳೂರು: ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರಂಭವಾಗಿರುವ ಮನೆ–ಮನೆ ಸಮೀಕ್ಷೆ ಕಾರ್ಯಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಚಾಲನೆ ನೀಡಿದರು.

‘ಕೊರೊನಾ ಸೋಂಕು ನಿಯಂತ್ರಣಕ್ಕೆ ನಾಗರಿಕರನ್ನು ಒಳಗೊಂಡ ಕಾರ್ಯಪಡೆ ರಚಿಸಬೇಕು ಎಂಬ ಸರ್ಕಾರದ ನಿರ್ಧಾರದ ಮೇರೆಗೆ ರಾಜ್ಯದಲ್ಲೇ ಮೊದಲ ಬಾರಿಗೆ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಚಾಲನೆ ನೀಡಲಾಗಿದೆ’ ಎಂದು ಸುಧಾಕರ್ ಹೇಳಿದರು.

‘ಸ್ವಯಂ ಪ್ರೇರಣೆಯಿಂದ ಕಾರ್ಯಪಡೆಯಲ್ಲಿ ಭಾಗಿಯಾಗಿರುವ ನಾಗರಿಕರು ಬೂತ್ ಮಟ್ಟದಲ್ಲೇ ಸೋಂಕು ನಿಗ್ರಹಕ್ಕೆ ಎಚ್ಚರ ವಹಿಸಬೇಕು’ಎಂದು ತಿಳಿಸಿದರು.

ADVERTISEMENT

ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿರ್‍ಯಾಪಿಡ್ ಆ್ಯಂಟಿಜನ್ ಪರೀಕ್ಷೆಗೂ ಸಚಿವರು ಚಾಲನೆ ನೀಡಿದರು.ಶಾಸಕ ಎಸ್.ಆರ್.ವಿಶ್ವನಾಥ್ ಇದ್ದರು.

ರಾಜಾನುಕುಂಟೆ ಗ್ರಾಮದಲ್ಲೂ ಸಮೀಕ್ಷೆ
‌ಹೆಸರಘಟ್ಟ:
ಸಮೀಪದ ರಾಜಾನುಕುಂಟೆ ಗ್ರಾಮದಲ್ಲೂ ಮನೆ ಮನೆ ಸಮೀಕ್ಷೆ ಕಾರ್ಯಕ್ಕೆ ಶಾಸಕ ಎಚ್.ಎಸ್. ವಿಶ್ವನಾಥ್ ಚಾಲನೆ ನೀಡಿದರು.

‘15 ಸದಸ್ಯರಿರುವ ಸ್ವಯಂ ಸೇವಕರ ತಂಡವು ಪ್ರತಿ ಮನೆಗೆ ತೆರಳಿ ಆರೋಗ್ಯ ಪರೀಕ್ಷೆ ನಡೆಸಲಿದೆ.ಎಲ್ಲಾ ವಿವರಗಳನ್ನು ಪರಿಶೀಲಿಸಿ ಅಗತ್ಯ ಇದ್ದವರಿಗೆ ಚಿಕಿತ್ಸೆ ಕೊಡಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.