ಬೆಂಗಳೂರು:ಬೆಳ್ಳಂದೂರಿನ ಹೊರ ವರ್ತುಲ ರಸ್ತೆಯಲ್ಲಿ (ಓಆರ್‌ಆರ್) ಶೀಘ್ರವೇ ಮೂರು ಸ್ಕೈ ವಾಕ್‌ಗಳು ನಿರ್ಮಾಣವಾಗಲಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಲಿದೆ. ರಸ್ತೆ ದಾಟುವ ವೇಳೆ ಹಲವು ಪಾದಚಾರಿಗಳು ಅಪಘಾತಕ್ಕೀಡಾಗುವ ಪ್ರಕರಣಗಳು ಇಲ್ಲಿ ಸಾಮಾನ್ಯವಾಗಿದ್ದವು.
ನಗರದ ಮಾಹಿತಿ ತಂತ್ರಜ್ಞಾನದ ತಾಣ ಎನಿಸಿರುವ ಬೆಳ್ಳಂದೂರಿನ ಈ ರಸ್ತೆಯಲ್ಲಿ ನಗರದ ಬೇರೆ ರಸ್ತೆಗಳಿಗಿಂತ ಸಾವಿರಾರು ವಾಹನಗಳು ಸಂಚರಿಸುತ್ತವೆ. 15 ದಿನಗಳ ಹಿಂದೆಯಷ್ಟೇ ಇಲ್ಲಿ ಅಪಘಾತ ಸಂಭವಿಸಿತ್ತು. ಇಂತಹ ಪ್ರಕರಣಗಳನ್ನು ತಪ್ಪಿಸಲು ಸ್ಕೈ ವಾಕ್‌ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಕಾಡುಬೀಸನಹಳ್ಳಿ ಬಳಿಯ ಪ್ರೆಸ್ಟೀಜ್ ಟೆಕ್ ಪಾರ್ಕ್ ಹತ್ತಿರ, ಬೆಳ್ಳಂದೂರಿನ ಸೆಂಟ್ರಲ್ ಮಾಲ್ ಬಳಿ ಮತ್ತು ಇಬ್ಲೂರು ಜಂಕ್ಷನ್ ಬಳಿ ಸ್ಕೈ ವಾಕ್ ನಿರ್ಮಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.