ADVERTISEMENT

ಬೆಂಗಳೂರು: 65 ವರ್ಷದ ವ್ಯಕ್ತಿಗೆ ಸೆರಾಮಿಕ್ ಇಂಪ್ಲಾಂಟ್ ಬಳಸಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 15:53 IST
Last Updated 12 ಸೆಪ್ಟೆಂಬರ್ 2025, 15:53 IST
ಸೆರಾಮಿಕ್ ಇಂಪ್ಲಾಂಟ್ ಅಳವಡಿಸಿದ ವೈದ್ಯರ ತಂಡ
ಸೆರಾಮಿಕ್ ಇಂಪ್ಲಾಂಟ್ ಅಳವಡಿಸಿದ ವೈದ್ಯರ ತಂಡ   

ಬೆಂಗಳೂರು: ವೈಟ್‌ಫೀಲ್ಡ್‌ನ ಆಸ್ಟರ್ ಆಸ್ಪತ್ರೆಯ ಮೂಳೆಚಿಕಿತ್ಸೆ ವಿಭಾಗದ ವೈದ್ಯರು 65 ವರ್ಷದ ವ್ಯಕ್ತಿಯೊಬ್ಬರಿಗೆ ಯಶಸ್ವಿಯಾಗಿ ಸೆರಾಮಿಕ್ ಇಂಪ್ಲಾಂಟ್‌ ಬಳಸಿ ಮಂಡಿ ಚಿಪ್ಪು ಬದಲಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. 

ಡಾ. ಕುಮಾರ್‌ದೇವ್ ಅರವಿಂದ್ ರಾಜಮಾನ್ಯ ನೇತೃತ್ವದ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. ಸಾಮಾನ್ಯವಾಗಿ ಸೊಂಟದ ಕೀಲು ಬದಲಾವಣೆಗಳಲ್ಲಿ ಸೆರಾಮಿಕ್ ಇಂಪ್ಲಾಂಟ್‌ಗಳನ್ನು ಬಳಸಲಾಗುತ್ತದೆ. ಇದೇ ಮೊದಲ ಬಾರಿ ಸಾಂಪ್ರದಾಯಿಕ ಲೋಹದ ಇಂಪ್ಲಾಂಟ್‌ ಬದಲಿಗೆ, ಸೆರಾಮಿಕ್ ಇಂಪ್ಲಾಂಟ್ ಬಳಸಲಾಗಿದೆ. ಲೋಹದ ಇಂಪ್ಲಾಂಟ್‌ಗಳಿಗೆ ಹೋಲಿಸಿದರೆ, ಸೆರಾಮಿಕ್ ಇಂಪ್ಲಾಂಟ್ ಹೆಚ್ಚು ಬಾಳಿಕೆ ಬರಲಿದೆ ಎಂದು ಆಸ್ಪತ್ರೆ ತಿಳಿಸಿದೆ.

‘ಸೆರಾಮಿಕ್ ಇಂಪ್ಲಾಂಟ್ ವ್ಯಕ್ತಿಗೆ ಹೆಚ್ಚಿನ ಆರಾಮ ನೀಡುತ್ತದೆ. ಇದು ಕೀಲಿನ ಸವೆತ ಮತ್ತು ಹರಿತವನ್ನು ತಡೆಯುತ್ತದೆ. ಲೋಹದ ಅಲರ್ಜಿ ಇರುವ ರೋಗಿಗಳಿಗೆ ಇದು ಉತ್ತಮ ಪರಿಹಾರ’ ಎಂದು ಡಾ. ಕುಮಾರ್‌ದೇವ್ ಅರವಿಂದ್ ರಾಜಮಾನ್ಯ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.