ADVERTISEMENT

ಬೆಂಗಳೂರು | ಪ್ರಯಾಣಿಕನಿಂದ ನಗದು, ಮೊಬೈಲ್ ಸುಲಿಗೆ: ಆಟೊ ಚಾಲಕನ ವಿರುದ್ಧ FIR

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 14:05 IST
Last Updated 6 ಜುಲೈ 2025, 14:05 IST
   

ಬೆಂಗಳೂರು: ಸ್ನೇಹಿತನ ನೋಡಲು ಉತ್ತರ ಪ್ರದೇಶದಿಂದ ಬಂದಿದ್ದ ವ್ಯಕ್ತಿಯ ಮೊಬೈಲ್ ಹಾಗೂ ₹2 ಸಾವಿರ ನಗದು ಸುಲಿಗೆ ಮಾಡಿದ ಆರೋಪದಡಿ ಆಟೊ ಚಾಲಕನ ವಿರುದ್ಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಗೂಲಿ ನೌಕರರಾಗಿರುವ ಉತ್ತರಪ್ರದೇಶದ ಮೊಹಮದ್ ಆಸೀಫ್‌ ಅವರ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

ಹಿಂದೆ ಚಿಕ್ಕಮಗಳೂರು ಸೇರಿ ಹಲವೆಡೆ ಎಸ್ಟೇಟ್‌ಗಳಲ್ಲಿ ಕೆಲಸ ಮಾಡಿದ್ದ ಆಸೀಫ್, ಸ್ನೇಹಿತನ ಸಲಹೆಯಂತೆ ಮತ್ತೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದಾರೆ.

ADVERTISEMENT

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಬೆಳಗಿನ ಜಾವ 4 ಗಂಟೆಗೆ ಬಂದಿಳಿದಿದ್ದಾರೆ. ‌ಜೆ.ಪಿ.ನಗರದಲ್ಲಿ ವಾಸವಿರುವ ಸ್ನೇಹಿತನ ಮನೆಗೆ ತೆರಳಲು ಆಟೊದಲ್ಲಿ ಹೊರಟಿದ್ದಾರೆ. ಆದರೆ, ಚಾಲಕ ಶೇಷಾದ್ರಿಪುರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅವರನ್ನು ಬೆದರಿಸಿ, ಮೊಬೈಲ್ ಹಾಗೂ ₹ 2 ಸಾವಿರ ನಗದು ಕಿತ್ತುಕೊಂಡು ಪರಾರಿಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.