ADVERTISEMENT

ಬೆಂಗಳೂರು | ಯುವತಿ ವಿಚಾರಕ್ಕೆ ಗಲಾಟೆ: ಆಟೊ ಚಾಲಕನಿಗೆ ಇರಿತ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 15:44 IST
Last Updated 3 ಫೆಬ್ರುವರಿ 2026, 15:44 IST
   

ಬೆಂಗಳೂರು: ಕೆ.ಆರ್. ಪುರದ ದೇವಸಂದ್ರದಲ್ಲಿ ಯುವತಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಆಟೊ ಚಾಲಕನಿಗೆ ಚಾಕುವಿನಿಂದ ಇರಿಯಲಾಗಿದೆ.

ಆಟೊ ಚಾಲಕ ರೋಷನ್ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಮಾಮು, ವಾಸಿಂ, ಯಾಸೀಫ್, ಖಲೀಂ ಎಂಬುವವರು ಪರಾರಿ ಆಗಿದ್ದಾರೆ. ಕೆ.ಆರ್‌. ಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರೋಪಿ ಮಾಮು ಹಾಗೂ ಹಲ್ಲೆಗೆ ಒಳಗಾದ ರೋಷನ್ ಅವರು ನೇಪಾಳದ ಯುವತಿಯನ್ನು ಪ್ರೀತಿಸುತಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಫೆ.1ರಂದು ರಾತ್ರಿ ಮಾತನಾಡಲು ದೇವಸಂದ್ರದಲ್ಲಿ ಸೇರಿದ್ದರು. ಸ್ವಲ್ಪ ಸಮಯದ ನಂತರ ಮಾಮು ಅವರ ಸಹಚರರು ಸ್ಥಳಕ್ಕೆ ಬಂದಿದ್ದರು. ಇದೇ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಜಗಳ ತಾರಕಕ್ಕೇರಿತ್ತು. ಆಗ ಮಾಮು ಸಹಚರರು ರೋಷನ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿ ಆಗಿದ್ದಾರೆ. ರೋಷನ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.