ಬೆಂಗಳೂರು: ಪಾಲಿಕೆಯ 225 ಹಿರಿಯ ಪೌರಕಾರ್ಮಿಕರನ್ನು ಸಿಂಗಾಪುರ ಪ್ರವಾಸಕ್ಕೆ ಕಳುಹಿಸಲು ಬಿಬಿಎಂಪಿ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ.
ಅತಿ ಹೆಚ್ಚು ಶುಚಿತ್ವ ಕಾಪಾಡುವ ಪೌರಕಾರ್ಮಿಕರನ್ನು ಅವರ ಅನುಭವದ ಮೇರೆಗೆ ಆಯ್ಕೆ ಮಾಡಲಾಗುತ್ತದೆ. ಸಿಂಗಾಪುರ ಪ್ರವಾಸಕ್ಕೆ ಬಿಬಿಎಂಪಿಯ ಕಲ್ಯಾಣ ಮತ್ತು ನಗರಾಭಿವೃದ್ಧಿ ಇಲಾಖೆಗಳು ಹಣ ಒದಗಿಸಲಿವೆ.
‘ಈ ಹಿಂದೆಯೂ ಪೌರಕಾರ್ಮಿಕರಿಗೆ ಪ್ರವಾಸಗಳನ್ನು ಆಯೋಜಿಸಲಾಗಿತ್ತು. ಸಾಕಷ್ಟು ಮೊದಲೇ ಅರ್ಹರನ್ನು ಗುರುತಿಸಿ, ಅವರು ಪಾಸ್‌ಪೋರ್ಟ್ ಸಿದ್ಧಪಡಿಸಿಕೊಳ್ಳಲು ಅವಕಾಶ, ನೆರವು ನೀಡಲಾಗುತ್ತದೆ ಎಂದು ಬಿಬಿಎಂಪಿಯ ಆರೋಗ್ಯ ಮತ್ತು ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ವಿಕಾಶ್ ಸುರಳ್ಕರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.