ADVERTISEMENT

ಜಿಬಿಎ: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 19:16 IST
Last Updated 28 ಫೆಬ್ರುವರಿ 2026, 19:16 IST
   

ಬೆಂಗಳೂರು: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 5.6 ಕಿ.ಮೀ ಪಾದಚಾರಿ ಮಾರ್ಗ ಮತ್ತು ರಸ್ತೆಯಲ್ಲಿ ಶನಿವಾರ ಸ್ವಚ್ಛತೆ ನಡೆಸಲಾಗಿದೆ.

35 ಟ್ರ್ಯಾಕ್ಟರ್, ಏಳು ಜೆಸಿಬಿ ಬಳಕೆಯೊಂದಿಗೆ 55 ಲೋಡ್ ತ್ಯಾಜ್ಯ ಹಾಗೂ 20 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ ಮಾಡಲಾಯಿತು. 108 ಪೌರಕಾರ್ಮಿಕರು ಹಾಗೂ ಸ್ವಚ್ಛತೆ ಸಿಬ್ಬಂದಿ ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾದ್ದರು ಎಂದು ಆಯುಕ್ತ ರಾಜೇಂದ್ರ ಚೋಳನ್‌ ತಿಳಿಸಿದರು.

ನಗರದ ವಿವಿಧ ಭಾಗಗಳಲ್ಲಿ ಕಸದ ಸಂಗ್ರಹಣೆ ಹೆಚ್ಚಾಗಿರುವ ಸ್ಥಳಗಳನ್ನು ಗುರುತಿಸಿ, ದೈನಂದಿನ ಸ್ವಚ್ಛತಾ ಕಾರ್ಯಗಳೊಂದಿಗೆ ವಿಶೇಷ ಸ್ವಚ್ಛತಾ ಕಾರ್ಯಗಳನ್ನು ನಿರಂತರವಾಗಿ ನಡೆಸುವ ಮೂಲಕ ನಾಗರಿಕರಿಗೆ ಸ್ವಚ್ಛ, ಆರೋಗ್ಯಕರ ಮತ್ತು ಸುಗಮ ಪರಿಸರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ADVERTISEMENT

ಚಾಮರಾಜಪೇಟೆ ಕ್ಷೇತ್ರದ ಸಂಗಮ್ ಸರ್ಕಲ್ ಹಾಗೂ ಪಾದರಾಯನಪುರ ರಸ್ತೆ, ಚಿಕ್ಕಪೇಟೆ ಕ್ಷೇತ್ರದ ವಾರ್ಡ್-118 ಎಚ್. ಸಿದ್ದಯ್ಯ ರಸ್ತೆ, ಅಕ್ಕಪಕ್ಕ ರಸ್ತೆಗಳು ಹಾಗೂ ಕೆಂಪೇಗೌಡನಗರ, ಗಾಂಧಿನಗರ ಕ್ಷೇತ್ರದ ಕೆ.ಸಿ. ಜನರಲ್ ಆಸ್ಪತ್ರೆ ಎದುರು, ಅಂಜನೇಯ ದೇವಸ್ಥಾನ ರಸ್ತೆ 2ನೇ ಕ್ರಾಸ್ ಹಾಗೂ ರಾಜಶಂಕರ್ ಕುಳ್ಳ ಪಾರ್ಕ್ ಎದುರಿನ ರಸ್ತೆಗಳು, ಶಾಂತಿನಗರ ಕ್ಷೇತ್ರದ ಎ.ಕೆ. ಕಾಲೊನಿ, ದೊಮ್ಮಲೂರು ವಾರ್ಡ್ ಉಪ ವಿಭಾಗ ಹಾಗೂ ಶಾಂತಿನಗರ ವಿಭಾಗದ ಸುತ್ತಮುತ್ತಲಿನ ಪ್ರದೇಶ, ಶಿವಾಜಿನಗರ ಕ್ಷೇತ್ರದ ರಸೆಲ್ ಮಾರ್ಕೆಟ್ ಮತ್ತು ಚಾಂದಿನಿ ಚೌಕ್ ಸುತ್ತಮುತ್ತಲಿನ ರಸ್ತೆ, ಸಿ.ವಿ. ರಾಮನ್ ನಗರ ಕ್ಷೇತ್ರದ ಕೋನೇನ ಅಗ್ರಹಾರ ಪ್ರದೇಶದ ಮುರುಗೇಶ್ ಪಾಳ್ಯ ಚರ್ಚ್ ಸ್ಟ್ರೀಟ್ ಮತ್ತು ಸಿಂಡಿಕೇಟ್ ಬ್ಯಾಂಕ್ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.