ADVERTISEMENT

ನಗರದಲ್ಲಿ ಇಂದು: ಬೆಂಗಳೂರಿನ ಇಂದಿನ ಕಾರ್ಯಕ್ರಮಗಳ ಪಟ್ಟಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 18:33 IST
Last Updated 18 ಜನವರಿ 2024, 18:33 IST
ನಿರ್ಮಲಾನಂದನಾಥ ಸ್ವಾಮೀಜಿ
ನಿರ್ಮಲಾನಂದನಾಥ ಸ್ವಾಮೀಜಿ   

ಶ್ರೀರಕ್ಷ ಪ್ರಿಯರನ್, ಅಜಯ್‌ ವಾರಿಯರ್‌ ಹಾಡಿರುವ ಗೀತೆಗಳ ಬಿಡುಗಡೆ: ಬಸವರಾಜ ಬೊಮ್ಮಾಯಿ, ಆಯೋಜನೆ: ಡಾ. ಜಯಶ್ರೀ ಅರವಿಂದ್ ಪ್ರತಿಷ್ಠಾನ, ಸ್ಥಳ: ಉತ್ತರಾದಿ ಮಠ, ನ್ಯಾಷನಲ್ ಕಾಲೇಜಿನ ಎದುರು, ಬಸವನಗುಡಿ, ಬೆಳಿಗ್ಗೆ 9

ಉದ್ಯಮಿ ಒಕ್ಕಲಿಗ ‘ಫಸ್ಟ್‌ ಸರ್ಕಲ್ ಎಕ್ಸ್‌ಪೊ–2024, ವಾರ್ಷಿಕ ಸಮಾವೇಶ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಉದ್ಘಾಟನೆ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಅತಿಥಿಗಳು: ಎಚ್.ಡಿ. ದೇವೇಗೌಡ, ಎಸ್.ಎಂ. ಕೃಷ್ಣ, ಬಿ.ಎನ್. ಬಚ್ಚೇಗೌಡ, ಕೆ. ಗೋವಿಂದರಾಜು, ರಾಮಲಿಂಗಾರೆಡ್ಡಿ, ಎನ್. ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಆಯೋಜನೆ: ಒಕ್ಕಲಿಗ ಉದ್ಯಮಿ, ಸ್ಥಳ: ಗಾಯತ್ರಿ ವಿಹಾರ, ಗೇಟ್‌ ಸಂಖ್ಯೆ–4, ಅರಮನೆ ಮೈದಾನ, ಬೆಳಿಗ್ಗೆ 10

‘ದ್ರೌಪದಿ ಪ್ರತಾಪ’, ‘ಬ್ರಹ್ಮಕಪಾಲ’ ಯಕ್ಷಗಾನ ತರಗತಿಯ ತರಬೇತಿ: ತರಬೇತುದಾರರು: ಸುಬ್ರಾಯ ಹೆಬ್ಬಾರ್ ಬಿ., ಬೇಗಾರ ಶಿವಕುಮಾರ್, ಆಯೋಜನೆ: ಬಂಟರ ಸಂಘ ಬೆಂಗಳೂರು, ಸ್ಥಳ: ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಭವನ, ಮಧ್ಯಾಹ್ನ 1ರಿಂದ

ADVERTISEMENT

ಸ್ಕೌಟ್ಸ್‌ ಮತ್ತು ಗೈಡ್ಸ್‌, ರೋವರ್ಸ್‌ ಮತ್ತು ರೇಜರ್ಸ್‌ಗಳಿಗೆ ‘ಚತುರ್ಥ ಚರಣ್ ಕಬ್ಸ್‌, ಹೀರಕ್ ಪಂಖ್ ಬುಲ್‌ಬುಲ್ಸ್‌, ರಾಜ್ಯ ಪುರಸ್ಕಾರ’: ಥಾವರಚಂದ್ ಗೆಹಲೋತ್, ಅತಿಥಿಗಳು: ಡಾ.ಎಂ.ಸಿ. ಸುಧಾಕರ್, ರಿತೇಶ್ ಕುಮಾರ್ ಸಿಂಗ್, ಆಯೋಜನೆ: ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್, ಸ್ಥಳ: ಗಾಜಿನಮನೆ, ರಾಜಭವನ, ಮಧ್ಯಾಹ್ನ 3.30

ಕನಕದಾಸರ ಜಯಂತಿ: ಉದ್ಘಾಟನೆ: ಮಲ್ಲಿಕಾರ್ಜುನ ಬಾಲದಂಡಿ, ದಿನದರ್ಶಿಕೆ ಬಿಡುಗಡೆ: ಎಚ್. ಕಾಂತರಾಜ, ಅಧ್ಯಕ್ಷತೆ: ಸಿ.ಎಂ. ಧನಂಜಯ, ಅತಿಥಿಗಳು: ಕೆಂಪಣ್ಣ, ಶಿವಶಂಕರ್ ಯಡ್ರಾಮಿ, ಬಸವರಾಜ ಬಸಲಗುಂಡಿ, ಕೃಷ್ಣಮೂರ್ತಿ, ಆಯೋಜನೆ: ಕನಕ ವಕೀಲರ ವೇದಿಕೆ, ಸ್ಥಳ: ಮಹಾರಾಷ್ಟ್ರ ಮಂಡಲ, ಗಾಂಧಿನಗರ, ಸಂಜೆ 5.30

ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಜಯಂತಿ, ಕರ್ನಾಟಕ ರಾಜ್ಯ ಒಕ್ಕಲಿಗರ ಡೈರೆಕ್ಟರಿ ಟ್ರಸ್ಟ್‌ನ ಬೆಳ್ಳಿ ಹಬ್ಬ: ಆಶೀರ್ವಚನ: ನಿರ್ಮಲಾನಂದನಾಥ ಸ್ವಾಮೀಜಿ, ‘ಜೀವನಸೂಕ್ತಿ ಸಾರ’ ಪುಸ್ತಕ ಬಿಡುಗಡೆ: ಸಿದ್ಧಲಿಂಗ ಸ್ವಾಮೀಜಿ, ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಉಪಸ್ಥಿತಿ: ಸೌಮ್ಯನಾಥ ಸ್ವಾಮೀಜಿ, ಅಧ್ಯಕ್ಷತೆ: ಎಚ್.ಡಿ. ದೇವೇಗೌಡ, ‘ಗುರುವಾಣಿ’ ಪುಸ್ತಕ ಬಿಡುಗಡೆ: ಎಸ್.ಎಂ. ಕೃಷ್ಣ, ಉದ್ಘಾಟನೆ: ಡಿ.ಕೆ. ಶಿವಕುಮಾರ್, ಅತಿಥಿಗಳು: ಎಚ್.ಡಿ. ಕುಮಾರಸ್ವಾಮಿ, ಆರ್. ಅಶೋಕ, ರಾಮಲಿಂಗಾರೆಡ್ಡಿ, ಎನ್. ಚಲುವರಾಯಸ್ವಾಮಿ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಎಂ. ಕೃಷ್ಣಪ್ಪ, ಡಿ. ಹನುಮಂತಯ್ಯ, ಆಯೋಜನೆ: ಕರ್ನಾಟಕ ರಾಜ್ಯ ಒಕ್ಕಲಿಗರ ಡೈರೆಕ್ಟರಿ ಟ್ರಸ್ಟ್‌, ಸ್ಥಳ: ಟೌನ್‌ಹಾಲ್‌, ಜೆ.ಸಿ. ರಸ್ತೆ, ಸಂಜೆ 4

ಸರ್‌ ಐಸಾಕ್ ಪಿಟ್‌ಮನ್‌ ಜಯಂತಿ, ಬಿ. ಲೂಥಿವರ ಸಂಸ್ಮರಣೆ: ಅತಿಥಿಗಳು: ಎ.ಎಂ. ಮರುಳಿನಾಥ, ರವೀಂದ್ರ ಟಿ.ಎಲ್., ಅಧ್ಯಕ್ಷತೆ: ಶಿವಣ್ಣ, ಆಯೋಜನೆ ಮತ್ತು ಸ್ಥಳ: ಕರ್ನಾಟಕ ಶೀಘ್ರಲಿಪಿಗಾರರ ಸಂಘ, ಕಂದಾಯ ಭವನ, ಕೆ.ಜಿ. ರಸ್ತೆ, ಸಂಜೆ 5.30

‘ರಾಮಾಯಣ ಚಿತ್ರ ಮತ್ತು ಪರಿಕಲ್ಪನೆ’ ಕುರಿತ ಕಲಾಕೃತಿಗಳ ಪ್ರದರ್ಶನ: ಉದ್ಘಾಟನೆ: ಲಿಂಗರಾಜ ಗಾಂಧಿ, ಉಪಸ್ಥಿತಿ: ಎಂ.ಎಸ್. ಮೂರ್ತಿ, ಅಧ್ಯಕ್ಷತೆ: ಬಿ.ಎಲ್. ಶಂಕರ್, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5.30

ಚೈತನ್ಯ ಸಂಜೆ: ‘ಶರಣ ಚಿಂತಕ, ವಚನಕಾರ ಮಹಾದೇವ ಬಣಕಾರ’ ಕುರಿತು ಉಪನ್ಯಾಸ: ಪುಷ್ಪಾ ಬಸವರಾಜ್ ಬಣಕಾರ, ಅಧ್ಯಕ್ಷತೆ: ಫಾಲನೇತ್ರ, ಉಪಸ್ಥಿತಿ: ದಿಬ್ಬೂರು ಎಸ್. ಗಿರೀಶ್, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆಎಸ್ಎಸ್ ಕಾಲೇಜಿನ ಸಭಾಂಗಣ, ಜಯನಗರ, ಸಂಜೆ 5.30

ಕೀರ್ತನೆಗಳ ಗಾಯನ: ಎಂ.ಬಿ. ಹರಿಹರನ್, ಎಸ್. ಅಶೋಕ್, ಪಿಟೀಲು: ವೈಭವ್ ರಮಣಿ, ಮೃದಂಗ: ಫಣೀಂದ್ರ ಭಾಸ್ಕರ್, ಖಂಜೀರಾ: ಸುನಾದ್ ಆನೂರ್, ಆಯೋಜನೆ: ಬಿಟಿಎಂ ಕಲ್ಚರಲ್ ಅಕಾಡೆಮಿ, ಸ್ಥಳ: ರಮಣ ಮಹರ್ಷಿ ಅಕಾಡೆಮಿ, ಜೆ.ಪಿ. ನಗರ, ಸಂಜೆ 5.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.